ಡಿವಿಜಿ ಸುದ್ದಿ, ದಾವಣಗೆರೆ: ಬಜೆಟ್ ಮೇಲಿನ ಚರ್ಚೆಯ ವೇಳೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿರುವ ಶಾಸಕರಿಗೆ ಅಭಿನಂದನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕೂಡಲೇ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ, ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದ ಸಭೆಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿರುವ ಶಾಸಕರಿಗೆ ಮೊದಲು ನಾನು ಅಭಿನಂದಿಸುತ್ತೇನೆ. ಸರಕಾರ ಕೂಡಲೇ ನಿಗಮ ಸ್ಥಾಪನೆಗೆ ಮುಂದಾಗಬೇಕು. ವೀರಶೈವ ಲಿಂಗಾಯತರಲ್ಲಿ ಹಲವು ಉಪ ಪಂಗಡಗಳಿದ್ದು ಇಲ್ಲೂ ಸಹ ಅನೇಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.ಆರ್ಥಿಕ ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜ ಮುಂದು ಬರಲು ಈ ನಿಗಮ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮುತುವರ್ಜಿ ವಹಿಸಿ ನಿಗಮದ ಸ್ಥಾಪನೆಗೆ ತಕ್ಷಣ ಮುಂದಾಗಬೇಕು ಎಂದರು.
ಕೆಲ ರಾಜಕಾರಣಿಗಳು ನಿಗಮ ಸ್ಥಾಪನೆಗೆ ಅಡ್ಡಿ ಪಡಿಸುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ.ಇದು ನಿಜಕ್ಕೂ ಅಕ್ಷಮ್ಯ ಅಪರಾಧ. ಈ ರೀತಿಯಾಗಿ ಸಮಾಜ ದ್ರೋಹದ ಕೆಲಸಕ್ಕೆ ಕೈ ಹಾಕಿದವರಿಗೆ ತಕ್ಕ ಪಾಠ ಕಲಿಸಲಾಗುವುದು. ಈಗಾಗಲೇ ಉಪ ಜಾತಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಸಮಾಜ ಒಡೆದು ಛಿದ್ರ ಛಿದ್ರವಾಗಿ ಹೋಗಿದೆ. ಇದರ ಅರಿವು ಮತ್ತು ಸ್ವಾಭಿಮಾನ ಬೆಳೆಸಿಕೊಳ್ಳುವ ಕೆಲಸ ಸಮಾಜದ ಶಾಸಕರುಗಳು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ್, ಶ್ರೀಕಾಂತ್ ನೀಲಗುಂದ ,ಗಂಗಾಧರ,ಮೌನೇಶ,ಶಿವಣ್ಣ, ಟಿಂಕರ್ ,ಮಂಜಣ್ಣ ಅಭಿಷೇಕ ರಾಜು ಪಿ ಎಸ್ ವೀರಣ್ಣ. ಮಂಜುಳ ಮಹೇಶ್, ಮಲ್ಲಿಕಾರ್ಜುನ್ ನ್ಯಾಮತಿ, ಎಮ್ ಬಿ.ಪ್ರಕಾಶ್, ಮಲ್ಲಿಕಾರ್ಜುನ್ ಕಟ್ಟಿಮನಿ , ಪುಷ್ಪವಾಲಿ, ಗಿರೀಶ್ ಬೇತೂರ್. ಶಿವಕುಮಾರ್, ಜಯರುದ್ರೇಶ್ ದಂದೂರ್, ಶಿವಕುಮಾರ್ ಎಣ್ಣೆರ್, ಮೊಹನ್ ನಾಗರಾಜ್, ನಾಗರ್ ಅಂಗಡಿ, ಚೇತನ್ ಎಸ್ ಕೆ , ಶಿವಾನಂದ್, ದ್ರಾಕ್ಷಯಣಿ, ಶೋಭಾ ಕೊಟ್ರೇಶ್, ಹರೀಶ್ ಶಾಮನೂರು , ಶಾಕುಂತಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು



