ಡಿವಿಜಿ ಸುದ್ದಿ, ದಾವಣಗೆರೆ : ಕೆಎಂಎಫ್ ಮೂಲಕ ರೈತರು ಬೆಳೆದ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ದಾವಣಗೆರೆ ಭಾಗದ ರೈತರಿಗೆ ದಾವಣಗೆರೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ದಾವಣಗೆರೆ ಎಪಿಎಂಸಿ ಅಧ್ಯಕ್ಷ ಕೆ.ಜಿ.ಶಾಂತರಾಜ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ಭಾಗದ ರೈತರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಹೋಗಿ ಮಾರಾಟ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಒಂದೇ ದಿನದಲ್ಲಿ ಸ್ಯಾಪಲ್ ತಗೆದುಕೊಂಡು ಹೋಗಬೇಕು. ಅದೇ ದಿನ ಮೆಕ್ಕೆಜೋಳ ಸರಬರಾಜು ಮಾಡುವಂತೆ ಸೂಚಿಸಿದ್ದಾರೆ. ಶಿಕಾರಿಪುರ ದಾವಣಗೆರೆಯಿಂದ 80 ರಿಂದ 100 ಕಿ.ಮೀಟರ್ ಇದೆ. ಅಲ್ಲಿಗೆ ಸಾಗಿಸುವುದು ರೈತರಿಗೆ ಕಷ್ಟವಾಗುತ್ತದೆ. ಹೀಗಾಗಿ ದಾವಣಗೆರೆ ಭಾಗದ ರೈತರಿಗೆ ದೊಡ್ಡ ಬಾತಿಯಲ್ಲಿಯೇ ಖರೀದಿ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಪಿ ಮಾಜಿ ಅಧ್ಯಕ್ಷ ಮುದೇಗೌಡರ ಗೀರೀಶ್, ದೊಗ್ಗಹಳ್ಳಿ ಬಸವರಾಜು ಉಪಸ್ಥಿತರಿದ್ದರು.



