ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಉಚ್ಚoಗಿದುರ್ಗದ ಉಚ್ಚoಗೆಮ್ಮನ ದೇವಸ್ಥಾನದಲ್ಲಿ ಇಂದಿನಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
https://www.facebook.com/permalink.php?story_fbid=255788105848072&id=105586904201527
ಕೊರೊನಾ ಲಾಕ್ ಡೌನ್ ಹಿನ್ನೆಲೆ ಕಳೆದ ಎರಡುವರೆ ತಿಂಗಳಿಂದ ಕ್ಲೋಸ್ ಆಗಿದ್ದ ದೇವಸ್ಥಾನ ಇಂದು ಬೆಳಗ್ಗೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರದ ಆದೇಶದಂತೆ ಸಕಲ ಸಿದ್ಧತೆಯೊಂದಿಗೆ ದೇವಿ ದರ್ಶನ ಪಡೆದರು.
ಲಾಕ್ ಡೌನ್ ಸಮಯದಲ್ಲಿ ದಿನ ನಿತ್ಯ ಪೂಜೆ ಸಲ್ಲಿಸಿ ದೇವಸ್ಥಾನದ ಬಾಗಿಲು ಹಾಕಲಾಗುತ್ತಿತ್ತು. ಇಂದು ಬೆಳೆಗ್ಗೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರು ದೇವಿಯ ದರ್ಶನ ಪಡೆದರು. ಭಕ್ತರಿಗೆ ಸ್ಯಾನಿಟೈಜರ್ , ಸ್ಕ್ಯಾನಿಂಗ್, ಮಾಸ್ಕ್ ಕಡ್ಡಾಯವಾಗಿತ್ತು.