ಡಿವಿಜಿ ಸುದ್ದಿ, ದಾವಣಗೆರೆ: ರಾಜನಹಳ್ಳಿಯ 2ನೇ ಹಂತದ ನೀರು ಸರಬರಾಜು ಕೇಂದ್ರದಲ್ಲಿ ಜಾಕ್‍ವೆಲ್‍ನ 1000 ಹೆಚ್.ಪಿ ಹಾಗೂ 500 ಹೆಚ್.ಪಿ ಪಂಪ್‍ಗಳ ದುರಸ್ತಿ ಕಾರ್ಯ ಇರುವುದರಿಂದ ನೀರು ಸಮರ್ಪಕವಾಗಿ ಪೊರೈಕೆಯಲ್ಲಿ ವ್ಯತ್ಯಯವಾಗಲಿದೆ.
ದಾವಣಗೆರೆ ನಗರದ ಕೆಳಭಾಗಕ್ಕೆ ಟಿ.ವಿ.ಸ್ಟೇಷನ್ ಪಂಪ್ ಹೌಸ್‍ನಿಂದ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಮೇಲ್ಬಾಗದ ವಾರ್ಡ್‍ಗಳಾದ 24, 25, 26, 27, 37, 38, 39, 40, 41ರ ಬನಶಂಕರಿ ಬಡಾವಣೆ 42, ಹಾಗೂ 43ರ ಶಾಮನೂರು ವಾರ್ಡ್‍ಗಳಲ್ಲಿ ನೀರು ಪೊರೈಕೆಯಲ್ಲಿ 48 ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ಮಹಾನಗರಪಾಲಿಕೆ ತಿಳಿಸಿದೆ.



