ಡಿವಿಜಿ ಸುದ್ದಿ, ದಾವಣಗೆರೆ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಸ್ವ-ಉದ್ಯೋಗ ಮತ್ತು ಕೌಶಲ್ಯಾಧಾರಿತ ತರಬೇತಿಯನ್ನು ಉಚಿತ ತರಬೇತಿ ಆಯೋಜಿಸಿದೆ.
ಉಚಿತ ಊಟ ಹಾಗೂ ವಸತಿಯೊಂದಿಗೆ 18 ರಿಂದ 45 ವಷ೯ದ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು,ಪುರುಷರು,ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ತರಬೇತಿಗೆ ಅಜಿ೯ಯನ್ನು ಆಹ್ವಾನಿಸಲಾಗಿದೆ.
ತರಬೇತಿಯನ್ನು ಭೋದನೆ ಮತ್ತು ಪ್ರಯೋಗಿಕವಾಗಿ ಅತ್ಯಂತ ನುರಿತ ಶಿಕ್ಷಕರಿಂದ ಬೋಧಿಸಲಾಗುವುದು ಮತ್ತು ಪ್ರಮಾಣಪತ್ರವನ್ನು ಸಹ ನೀಡಲಾಗುವುದು. ಸ್ವ-ಉದ್ಯೋಗವನ್ನು ಮಾಡಲು ಇಚ್ಛಿಸುವವರು ಮತ್ತು ನಿರುದ್ಯೋಗಿಗಳು ತಮ್ಮ ಹೆಸರನ್ನು ಮತ್ತು ಆಸಕ್ತ ತರಬೇತಿಯನ್ನು ಮುಂಚಿತವಾಗಿ ಅಜಿ೯ಯನ್ನು ಸಲ್ಲಿಸಬಹುದು. ಪ್ರಸ್ತುತ ಕೊರೊನಾ ವೈರಸ್ ಹರಡುವಿಕೆ ಕಾರಣ ಆರೋಗ್ಯ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಅಭ್ಯಥಿ೯ಗಳು ದೂರವಾಣಿ/ಆನ್ ಲೈನ್ ಲಿಂಕ್ ಮೂಲಕ https://docs.google.com/forms/d/1J6RN3IcPiSz936U-eEtGpEZ6vMzMf6aV3zhmdFIBm1c/ edit ಅಜಿ೯ಯನ್ನು ಸಲ್ಲಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ನಿದೇ೯ಶಕರು ಮತ್ತು ಉಪನ್ಯಾಸಕರು. ದೂ.ಸಂಖ್ಯೆ: 9481977076/7259731172/7975139332/9538395817.



