ಡಿವಿಜಿ ಸುದ್ದಿ, ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ನಟ ಡಾ.ಶಿವರಾಜ್ ಕುಮಾರ್, ಯೋಗ ಗುರು ಬಾಬಾ ರಾಮ್ ದೇವ್ ಚಾಲನೆ ನೀಡಿದರು.
ಲಿಂ. ಚಂದ್ರಶೇಖರ ಸ್ವಾಮೀಜಿಗಳ ಸ್ಮರಣೋತ್ಸವದ ಹಿನ್ನೆಲೆ ಕೃಷಿ ಮೇಳ ಆಯೋಜಿಸಲಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕೃಷಿ ಮೇಳ ನಡೆಯಲಿದೆ.
ಕೃಷಿ ಮೇಳದಲ್ಲಿ ಹಾಡು ಮೂಲಕ ಮನೋರಂಜನೆ ನೀಡಿದ ಶಿವರಾಜಕುಮಾರ ನೀಡಿದರು. ಶಿವರಾಜಕುಮಾರ್ ಹಾಡಿಗೆ ತಲೆದೂಗಿ ಎರಡು ಹೆಜ್ಜೆ ಹಾಕಿ ಸಿ.ಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ.
ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ , ಹಿರೇಕಲ್ಮಠದ ಚನ್ನಮಲ್ಲಿಕಾರ್ಜನ ಸ್ವಾಮಿ,ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಬಿದರ್ ಸಂಸದ ಭಗವಂತ್ ಖೂಬಾ ದಾವಣಗೆರೆ ಮೇಯರ್ ಅಜಯ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.