ಡಿವಿಜಿ ಸುದ್ದಿ, ದಾವಣಗೆರೆ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ (ಎಐಸಿಸಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹೀನಾಯವಾಗಿ ನಿಂಧಿಸಿದ ಜರ್ನಲಿಸ್ಟ್ ಅರ್ನಾಬ್ ಗೋಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ನಿಖಿಲ್ ಕೊಂಡಜ್ಜಿ ಎಸ್.ಪಿ ಹನುಮಂತರಾಯ ಅವರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್. ಕೆ. ಶೆಟ್ಟಿ, ದಾವಣಗೆರೆ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಘಟಕ ಸೈಯದ್ ಖಾಲಿದ್, ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್. ಹರೀಶ್ ಬಸಾಪುರ, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಅಲಿ ರೆಹಮತ್ ಪೈಲ್ವಾನ್ , ಎನ್.ಎಸ್.ಯು.ಐ ನ ಮುಜಾಹಿದ್, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಪ್ರಸನ್ನ ಬೆಳಕೆರೆ, ವಿನಯ್ ಜೋಗಪ್ಪ ನವರ್, ಪ್ರವೀಣ್, ಯುವರಾಜ್ ¸ಶಿವರಾಜ್, ಸಂದೀಪ್ ಉಪಸ್ಥಿತರಿದ್ದರು.