ಡಿವಿಜಿ ಸುದ್ದಿ, ಚನ್ನಗಿರಿ : ಶಾಲಾ ಮಕ್ಕಳಲ್ಲಿ ಅಂತರ್ಮುಖಿಯಾದ ಪ್ರತಿಭೆಯನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೆದಿಕೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಹಿರೇ ಕೋಗಲೂರು ಗ್ರಾಮದ ಮಾನಸ ಕಾನ್ವೆಂಟ್ ಶಾಲೆಯಾ ವಾರ್ಷಿಕೋತ್ಸವದ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಪೋಷಕರು ಹೆಚ್ಚಿನ ಕಾಳಜಿ ವಹಿಸಿದರೆ ಮಾತ್ರ ಮಕ್ಕಳು, ಈ ದೇಶದ ಆಸ್ತಿ ಆಗುತ್ತಾರೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಜಿಪಂ ಸದಸ್ಯೆ ಸಾಕಮ್ಮಾ ಗಂಗಾಧರನಾಯ್ಕ್ , ತಾಲೂಕ್ ಪಂಚಾಯಿತಿ ಅಧ್ಯಕ್ಷ ಉಷಾ ಶಶಿಕುಮಾರ್ . ತಾಲೂಕ್ ಪಂಚಾಯಿತಿ ಸದಸ್ಯ ವೀಣಾಕುಮಾರಿ ಹನುಮಂತಪ್ಪ, ಶಾಲಾ ಆಡಳಿತಾಧಿಕಾರಿ ಬಸವನಗೌಡ ,ಎಸ್ ಡಿ ಎಂಸಿ ಅಧ್ಯಕ್ಷ ಹೆಚ್. ಆರ್. ವೀರಭದ್ರಪ್ಪ . ಮುಖಂಡ ಜಗದೀಶ್ ಗೌಡ , ಮುಖ್ಯೋಪಧ್ಯಾಯಿನಿ ಮಹಾದೇವಿ ಹಾಗೂ ಶಿಕ್ಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.