ಡಿವಿಜಿ ಸುದ್ದಿ, ದಾವಣಗೆರೆ : ಕೋವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಡಿವಾಳ, ಸವಿತ ಸಮಾಜ ವೃತ್ತಿ ನಿರತ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ರೂ.5000 ಘೋಷಣೆ ಮಾಡಿದ್ದು, ಆಸಕ್ತ ಫಲಾನುಭವಿಗಳು ಪರಿಹಾರವನ್ನು ಪಡೆಯಲು ಸೇವಾ ಸಿಂಧು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಉದ್ಯೋಗ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅರ್ಜಿದಾರರು ಗ್ರಾಮೀಣ ಮಟ್ಟದಲ್ಲಿ ಪಿಡಿಓ, ಕಾರ್ಯದರ್ಶಿ ಮತ್ತು ನಗರ ವ್ಯಾಪ್ತಿಯಲ್ಲಿ ಪಾಲಿಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಕಂದಾಯ ನಿರೀಕ್ಷಕರು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳಿಂದ ಮತ್ತು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರುಗಳಿಂದ ಉದ್ಯೋಗ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಸಹಾಯಧನಕ್ಕೆ ಜೂ.30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿತ್ತು. ಆದರೆ, ಅವಧಿ ವಿಸ್ತರಿಸುವಂತೆ ಮನವಿ ಸಮಾಜ ಸಂಘಟನೆಗಳು ಮನವಿ ಮಾಡಿದ ಹಿನ್ನೆಲೆ ಜುಲೈ 10 ವರೆಗೆ ಅವಧಿ ವಿಸ್ತರಿಸಲಾಗಿದೆ. ಅರ್ಜಿಯೊಂದಿಗೆ ಮೂಲ ದಾಖಲೆಗಳಾದ ಉದ್ಯೋಗ ದೃಢೀಕರಣ ಪತ್ತ, ಸ್ವಯಂ ಘೋಷಣೆ, ಬಿ.ಪಿ.ಎಲ್ ಕಾರ್ಡ್, ಜನ್ಮ ದಿನಾಂಕ ದಾಖಲೆ ಮತ್ತು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (ಎಲ್ಲಾ ದಾಖಲೆಗಳನ್ನು ಸೇವಾಸಿಂಧುವಿನಲ್ಲಿ ಅಪ್ಲೋಡ್ ಮಾಡುವುದು) ಸಲ್ಲಿಸಬೇಕೆಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.



