ಡಿವಿಜಿ ಸುದ್ದಿ , ಚನ್ನಗಿರಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಟದಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಕಾರ್ಯ ನಿರ್ವಹಿಸಿದ ಸಂತೇಬೆನ್ನೂರು ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಎಸ್. ಮೇಟಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದ್ದಾರೆ.
ಶಿವರುದ್ರಪ್ಪ ಎಸ್ ಮೇಟಿ ರವರು ತಾಲೂಕಿನಲ್ಲೆ ದೊಡ್ಡ ಹೊಬಳಿಯಾದ ಸಂತೇಬೆನ್ನೂರು ಗ್ರಾಮದಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದ್ದರು. ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಕೊರೊನಾ ವಿರುದ್ಧದ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು. ಮೇಟಿ ಅವರ ಅವಿಸ್ಮರಣೀಯ ಕಾರ್ಯಗಳನ್ನು ಮೆಚ್ಚಿದ ಎಸ್ ಪಿ ಅವರು ಪ್ರಶಂಸನೀಯ ಪತ್ರ ನೀಡಿದ್ದಾರೆ.



