ಡಿವಿಜಿ ಸುದ್ದಿ, ದಾವಣಗೆರೆ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ದಾವಣಗೆರೆ ಜಿಲ್ಲೆಗೆ ಈ ಬಾರಿ ಶೇ. 64.09 ರಷ್ಟು ಫಲಿತಾಂಶ ಬಂದಿದೆ. ಈ ಮೂಲಕ ದಾವಣಗೆರೆ ಜಿಲ್ಲೆ19 ನೇ ಸ್ಥಾನ ಪಡೆದಿದೆ .
ದಾವಣಗೆರೆಯಲ್ಲಿ ಕಳೆದ ಬಾರಿ 22 ನೇ ಸ್ಥಾನದಲ್ಲಿದ್ದ ದಾವಣಗೆರೆ, ಈ ಬಾರಿ 19 ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ. 62.53ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ 16,219 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಜಿಲ್ಲೆಯ ವಿಷಯವಾರು ವಿವರ
ಕಲಾ ವಿಭಾಗ: 4,104 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,433 ವಿದ್ಯಾರ್ಥಿಗಳು ಪಾಸ್- ಶೇ 34.92
ವಾಣಿಜ್ಯ ವಿಭಾಗ: 4,589 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,729 ಮಂದಿ ಉತ್ತೀರ್ಣ- ಶೇ 59.47
ವಿಜ್ಞಾನ ವಿಭಾಗ: 7,526 ವಿದ್ಯಾರ್ಥಿಗಳಲ್ಲಿ 6,233 ಮಂದಿ ಉತ್ತೀರ್ಣ- ಶೇ 82.82
ರಾಜ್ಯದಲ್ಲಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದೆ. ಒಟ್ಟಾರೆ ರಾಜ್ಯದಲ್ಲಿ ಶೇ .61.80 ರಷ್ಟು ಫಲಿತಾಂಶ ಬಂದಿದೆ. ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನ ಪಡೆದಿವೆ.



