ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ಶ್ರೀ ರಾಜರಾಜೇಶ್ವರಿ ಬಡಾವಣೆಯ 1ನೇ ಮೇನ್, 2ನೇ ಕ್ರಾಸ್ ನಲ್ಲಿ ವಿದ್ಯತ್ ಸಂಪರ್ಕವಿಲ್ಲದೆ ಹೈ ಟೆನ್ಷನ್ ವಿದ್ಯುತ್ ಕಂಬವಿ ತೆರವು ಗೊಳಿಸವುಂತೆ ಸ್ಥಳೀಯ ನಿವಾಸಿಗಳು ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಸಲ್ಲಿಸಿದರು.
ಕಳೆದ 30 ವರ್ಷಗಳಿಂದ ವಿದ್ಯುತ್ ಸಂಪರ್ಕವಿತ್ತು. ಆದರೆ 3 ವರ್ಷಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈ ಸಂಪರ್ಕವು ರಸ್ತೆಯ ತಿರುವಿಗೆ ಹೊಂದಿಕೊಂಡಿದ್ದು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಜನರ ಪ್ರಾಣಕ್ಕೂ ಸಹ ಅಪಾಯ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿದ್ಯುತ್ ಕಂಬವನ್ನು ತೆರವು ಮಾಡಿಕೊಡುವುದರ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಶ್ರೀ ರಾಜರಾಜೇಶ್ವರಿ ಬಡಾವಣೆಯ ಸಾರ್ವಜನಕರು, ಸುವರ್ಣ ಕರ್ನಾಟಕ ವೇದಿಕೆಯ ಕಾರ್ಯಕರ್ತರು ಮನವಿಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕರಣ್ಣ, ಪರಮೇಶ್, ಆಕಾಶ, ಕುಮಾರ, ರವಿ, ಸಾಗರ್ ಮತ್ತು ವೇದಿಕೆಯ ರಾಜ್ಯಾಧ್ಯಕ್ಷ ಸಂತೋಷ್‌ಕುಮಾರ್, ಕಣಿವೇಶ್, ಜಗದೀಶ್ ಇನ್ನು ಮುಂತಾದವರು ಭಾಗಿಯಾಗಿದ್ದರು.