ಡಿವಿಜಿ ಸುದ್ದಿ, ದಾವಣಗೆರೆ: ನಾಳೆ (ಮೇ 23) ದಾವಣಗೆರೆ ಬೆಸ್ಕಾಂ ಕಚೇರಿಯಲ್ಲಿ ತುರ್ತು ಕಾಮಗಾರಿ ಇರುವುದರಿಂದ ದಾವಣಗೆರೆ ಸಮೀಪದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ನಾಳೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶಾಮನೂರು ಮಾರ್ಗದ ಶಾಮನೂರು, ಜ.ಹೆಚ್.ಪಿ. ನಗರ. ಜೆ.ಹೆಚ್.ಪಿ ಮಾರ್ಗದ ಹೊಸ ಕುಂದವಾಡ, ಹಳೇ ಕುಂದವಾಡ. ತರಳಬಾಳು ಮಾರ್ಗದ ಶಿರಮಗೊಂಡನಹಳ್ಳಿ, ನಾಗನೂರು, 6 ನೇ ಮೈಲಿಗಲ್ಲು, 7 ನೇ ಮೈಲಿಗಲ್ಲು, ಬಿಸಲೇರಿ. ಎಫ್-12 ಅತ್ತಿಗೆರೆ ಮಾರ್ಗದ ಪಾಮೇನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



