ಡಿವಿಜಿ ಸುದ್ದಿ,ದಾವಣಗೆರೆ: ನಗರದ ಎಸ್.ವಿ.ಟಿ ಫೀಡರ್‍ನ, ಇಂಡಸ್ಟ್ರಿಯಲ್ ಫೀಡರ್‍ನಲ್ಲಿ ತುರ್ತುಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜ.19 ರಂದು ವಿದ್ಯುತ್ ವ್ಯತ್ಯಯವುಂಟಾಗಲಿದೆ.
ಎಸ್.ವಿ.ಟಿ ಫೀಡರ್‍ನ ಶ್ರೀನಿವಾಸನಗರ 1ನೇ ಕ್ರಾಸ್ ನಿಂದ 6ನೇ ಕ್ರಾಸ್ ವರೆಗೆ, ಆದಾಯ ತೆರಿಗೆ ಕಛೇರಿ, ನೀರಾವರಿ ಇಲಾಖೆ, ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಹಾಗೂ ಇಂಡಸ್ಟ್ರಿಯಲ್ ಫೀಡರ್‍ನ ಇಂಡಸ್ಟ್ರಿಯಲ್ ಏರಿಯ ಲೋಕಿಕೆರೆರಸ್ತೆ, ಸುಬ್ರಹ್ಮಣ್ಯನಗರ, ಎಸ್.ಎ .ರವೀಂದ್ರನಾಥ ಬಡಾವಣೆ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ



