ಡಿವಿಜಿ ಸುದ್ದಿ, ದಾವಣಗೆರೆ: ಬೆಸ್ಕಾಂ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ಸೆ.16 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಎಸ್ಎಸ್ ಹೈಟೆಕ್ ಫೀಡರ್ ವ್ಯಾಪ್ತಿಯ ಎಸ್.ಎಸ್. ಆಸ್ಪತ್ರೆ, ಎಸ್.ಒ.ಜಿ. ಕಾಲೋನಿ, ಬಸವ ಬುದ್ಧ ಭೀಮ ನಗರ, ಬೀಜ ನಿಗಮ, ಕೆ.ಎಸ್.ಆರ್.ಟಿ.ಸಿ ಡಿಪೋ, ಶಶಿ ಸೋಪ್ ಪ್ಯಾಕ್ಟರಿ, ಪ್ರಶಾಂತ ರೈಸ್ ಮಿಲ್, ರಾಮನಗರ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯತ್ಯವಾಗಲಿದೆ.
ಪಿ.ಜೆ. ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 03 ಗಂಟೆವರೆಗೆ ಪಿ.ಜೆ. ಬಡಾವಣೆ, ರಾಂ ಅಂಡ್ ಕೋ ಸರ್ಕಲ್, ಪೊಲೀಸ್ ಕ್ವಾಟ್ರಸ್, ಚರ್ಚ್ ರಸ್ತೆ, ಈದ್ಗಾ ಕಾಂಪ್ಲೆಕ್ಸ್, ಅರುಣಾ ಟಾಕೀಸ್, ರೈತರ ಬೀದಿ, ರೇಣುಕ ಮಂದಿರ ಹಾಗು ಸುತ್ತ ಮುತ್ತ ಪ್ರದೇಶ.
ದುರ್ಗಾಂಬಿಕ ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ03 ಗಂಟೆವರೆಗೆ ಹಳೆ ಮಟನ್ ಮಾರ್ಕೆಟ್, ಶಿವಾಜಿ ನಗರ, ಎಂ.ಬಿ. ಕೆರೆ, ಚಲವಾದಿ ಕೆರೆ, ಶಿವಾಲಿ ಟಾಕೀಸ, ಜಾಲಿ ನಗರ, ಇ.ಡಬ್ಲ್ಯೂ.ಎಸ್. ಕಾಲೋನಿ, ದುರ್ಗಾಂಬಿಕಾ ದೇವಸ್ಥಾನ ಹಾಗು ಸುತ್ತಮುತ್ತ ಪ್ರದೇಶ.
ಗ್ರಾಮೀಣ ಫೀಡರ್ ವ್ಯಾಪ್ತಿಯ ಅತ್ತಿಗೆರೆ ಫೀಡರ್‍ನ ಪಾಮೇನಹಳ್ಳಿ, ಪಾಮೇನಹಳ್ಳಿ ಮಟ್ಟಿ ತೋಳಹುಣಸೆ ಫೀಡರ್ ಯಲ್ಲಮ್ಮ ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



