ಡಿವಿಜಿ ಸುದ್ದಿ, ದಾವಣಗೆರೆ: ನಾಳೆ (ಆಗಸ್ಟ್ 20) ನಗರದ ಮೌನೇಶ್ವರ, ಜಯನಗರ ಫೀಡರ್ ಮತ್ತು ಇ.ಎಸ್.ಐಫೀಡರ್ , ಶನೇಶ್ವರ ಫೀಡರ್‍ಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ಕೆಐಯುಡಬ್ಲೂಎಂಐಪಿ ಯೋಜನೆಯಡಿಯಲ್ಲಿ ಒಳಚರಂಡಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮೌನೇಶ್ವರ ಫೀಡರ್‍ನ ಹೆಚ್.ಕೆ.ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್‍ರಸ್ತೆಹಾಗೂ ಸುತ್ತ ಮುತ್ತಲಿನ
ಪ್ರದೇಶಗಳು. ಜಯನಗರ ಫೀಡರ್‍ನ ಜಯನಗರ,ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ, ಎಸ್.ಎಸ್. ಹೈಟೆಕ್‍ಆಸ್ಪತ್ರೆರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಸುತ್ತ ಮುತ್ತಲಿನ ಪ್ರದೇಶಗಳು. ಇ.ಎಸ್.ಐ ಫೀಡರ್‍ನ ಇ.ಎಸ್.ಐ ಆಸ್ಪತ್ರೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ವ್ಯತ್ಯಯವಾಗಲಿದೆ.
ಶನೇಶ್ವರ ಫೀಡರ್‍ನ ಜಿ.ಎಂ.ಐ.ಟಿ. ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟಲ್, ಸಾಯಿ ಹೋಟಲ್, ಕೋರ್ಟ್ ಸುತ್ತ ಮುತ್ತ, ಗಿರಿಯಪ್ಪ ಲೇಔಟ್, ಪಿಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ವಾಣಿಜ್ಯ ತೆರಿಗೆ ಕಛೇರಿ, ಡೂಡಾ ಕಚೇರಿ, ವಿನಾಯಕ ನಗರ, ಶಂಕರ್ ವಿಹಾರ್ ಬಡಾವಣೆ, ಮೋತಿ ಬೇಕರಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.



