ಡಿವಿಜಿ ಸುದ್ದಿ, ದಾವಣಗೆರೆ:ನಾಳೆ (ಮೇ 20 ) ಕೋಡಿಹಳ್ಳಿ ನಿರಂತರ ಜ್ಯೋತಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕರೂರು, ಯರಗುಂಟೆ, ಅಶೋಕ ನಗರ, ಶಿವಪುರ, ಅವರಗೊಳ್ಳ, ಕಕ್ಕರಗೊಳ್ಳ, ಕೋಡಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.