ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದ ಶಿವಾಲಿ ಫೀಡರ್‍ನ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿಯ ಕಾಮಗಾರಿ ಇರುವುದರಿಂದ ನಾಳೆ (ಫೆ.25) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಾಲಿ ಫೀಡರ್‍ನ ವ್ಯಾಪ್ತಿಯ ಬಾಷಾನಗರ ಮೇನ್ ರೋಡ್, ಬೀಡಿ ಲೇಔಟ್, ರಝಾವುಲ್ಲ ಮುಸ್ತಫಾ ನಗರ, ಶಿವನಗರ ಮೇನ್ ರೋಡ್, ಹೆಗಡೆನಗರ, ಹೆಚ್ ಕೆ ಜಿ ಎನ್ ಶಾದಿಮಹಲ್ ಸುತ್ತಮುತ್ತ ಟಿಪ್ಪು ನಗರ, ಮಹಬೂಬ್ ನಗರ, ಹಳೆ ಇಎಸ್‍ಐ ಆಸ್ಪತ್ರೆ, ಮಿಲ್ಲತ್ ಶಾಲೆ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.



