ಡಿವಿಜಿ ಸುದ್ದಿ, ದಾವಣಗೆರೆ: ತಮಿಳುನಾಡು , ಕೇರಳಕ್ಕೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದ 77 ಜಾನುವಾರಗಳನ್ನು ಪೊಲೀಸರು ಭರ್ಜರಿ ಕಾರ್ಯಾಚಾರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ, ಒಟ್ಟು 12 ಜನರ ಬಂಧಿಸಿದ್ದಾರೆ. 77 ಜಾನುವಾರುಗಳಲ್ಲಿ 45 ಎಮ್ಮೆ 32 ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ.

ರಾಣೇಬೆನ್ನೂರು, ದಾವಣಗೆರೆ ಜಿಲ್ಲೆಯ ವಿವಿಧ ಪ್ರದೇಶದಿಂದ ಅಕ್ರಮವಾಗಿ ವಾಹನಗಳಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ನಾಲ್ಕು ಕಂಟೈನರ್ ಮೂಲಕ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ವಾಹನಲ್ಲಿಯೇ ಮೂರು ಜಾನುವಾರು ಸಾವನ್ನಪ್ಪಿವೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಪ್ತಿ ಮಾಡಿದ ಜಾನುವಾರುಗಳನ್ನು ಹೆಬ್ಬಾಳು ಬಳಿ ಗೋಶಾಲೆಯಲ್ಲಿ ಬಿಡಲಾಗಿದೆ.



