ಡಿವಿಜಿ ಸುದ್ದಿ, ದಾವಣಗೆರೆ: ಸೆಪ್ಟೆಂಬರ್ 1 ರಿಂದ ದಾವಣಗೆರೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಕವರ್ ಮಾರಾಟ ನಿಷೇಧವಿದ್ದರೂ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕೆಟಿಜಿ ನಗರದ ನಾಗಪ್ರಕಾಶ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ 20 ಕೆಜಿಯಷ್ಟು ಪ್ಲಾಸ್ಟಿಕ್ ಕವರ್ ವಶ ಪಡಿಸಿಕೊಳ್ಳಲಾಗಿದ್ದು, 8 ಸಾವಿರ ದಂಡ ವಿಧಿಸಲಾಗಿದೆ.

ಕೆಟಿಜಿ ನಗರದ 10 ನೇ ಮೇನ್ ನಲ್ಲಿರುವ ನಾಗಪ್ರಕಾಶ್, ಬೀದಿ ಬದಿ ವ್ಯಾಪಾರಿಗಳಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಕವರ್ ಗಳನ್ನು ಪಾಲಿಕೆ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಕವರ್ ನೀಡುತ್ತಿದ ಮಾಹಿತಿ ಪಡೆದ ಆರೋಗ್ಯ ನೀರಕ್ಷಕಿ ಮಲ್ಲಿಕಾ, ರಾಘವೇಂದ್ರ ಅವರು ದಾಳಿ ಮಾಡಿ 8 ಸಾವಿರ ದಂಡ ವಿಧಿಸಿದ್ದಾರೆ.



