ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ಹಿನ್ನೆಲೆ ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಉತ್ತರ ಭಾರತದ ಕಾರ್ಮಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ದಾವಣಗೆರೆ ಮಹಾನಗರ ಪಾಲಿಕೆ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಲ್ಲಿ ನಿಂತಿದ್ದಾರೆ.

ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ದೆಹಲಿ ಕಡೆಗೆ ತೆರಳಲು ಬೆಳಿಗ್ಗೆ 6 ಗಂಟೆಯಿಂದ ಕಾಯುತ್ತಿದ್ದಾರೆ. ಅಂತರ್ ಜಿಲ್ಲಾ, ರಾಜ್ಯಗಳಿಗೆ ತೆರಳಲು ಮಹಾನಗರ ಪಾಲಿಕೆಯಿಂದ ಪಾಸ್ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೆಲೆಸಿರುವ ಹೊರ ರಾಜ್ಯದವರು ಪಾಸ್ ಗಾಗಿ ಕಾಯುತ್ತಿದ್ದಾರೆ.



