ಡಿವಿಜಿ ಸುದ್ದಿ, ದಾವಣಗೆರೆ: ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆ ವತಿಯಿಂದ ಕಾವೇರಿ ಕೂಗು ಸಾಮಾಜಿಕ ಕಳಕಳಿ ಜಾಥಾ ಹಾಗೂ ಪರಿಸರ ಸಂರಕ್ಷಣೆ ಕುರಿತು ನೃತ್ಯ ಆಯೋಜಿಸಲಾಗಿತ್ತು.
ಆರೋಗ್ಯದಾಯಕ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಘೋಷ ವಾಕ್ಯದೊಂದಿಗೆ ಮಕ್ಕಳಲ್ಲಿ ಪರಿಸರ ಹಾಗೂ ನಾಡು-ನುಡಿ ವಿಚಾರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಕರುನಾಡಿನ ಜೀವ ನದಿ ಕಾವೇರಿಯ ಉಳಿವಿಗಾಗಿ ಜಾಥಾ ಆಯೋಜಿಸಲಾಗಿತ್ತು.

ಕಾವೇರಿ ನೀರಿನ ಉಳಿವಿಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸದುದ್ದೇಶದಿಂದ ಶಾಲಾ ಮಕ್ಕಳು ಸಂಜೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾವು ದಾವಣಗೆರೆಯ ಚಿತ್ರಕಲಾ ಕಾಲೇಜನಿಂದ ಪ್ರಾರಂಭವಾಗಿ ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮಾರ್ಗವಾಗಿ ಗುಂಡಿ ಮಹಾದೇವಪ್ಪ ವೃತ್ತವನ್ನು ತಲುಪಿ ಅಲ್ಲಿ ಕಾವೇರಿಯ ಬಗ್ಗೆ ಅರಿವು ಮೂಡಿಸುವ ಮೂರು ನಿಮಿಷದ ನೃತ್ಯ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಲೆ ಮುಖ್ಯಸ್ಥ ಮಂಜುನಾಥ್ ರಂಗರಾಜು, ಪ್ರಿನ್ಸಿಪಾಲ್ ಜೆ.ಎಸ್. ವನಿತಾ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.



