ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ಇಷ್ಟು ದಿನ ಹೆಲ್ಮೆಟ್, ಮಾಸ್ಕ್ ,ಇನ್ಶೂರೆನ್ಸ್ ಇಲ್ಲದವರಿಗೆ ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್ ರು ಇಂದಿನಿಂದ ಐಎಸ್ ಐ ಮಾರ್ಕ್ ಇಲ್ಲದ, ಅರ್ಧ ಹೆಲ್ಮೆಟ್ ಹಾಕಿಕೊಂಡು ಬಂದವರಿಂದ ದಂಡ ವಸೂಲಿ ಆರಂಭಿಸಿದ್ದಾರೆ.
ಈಗಾಗಲೇ ಕೊರೊನಾ ವೈರಸ್, ಲಾಕ್ ಡೌನ್ ನಿಂದ ತತ್ತರಿಸಿ ಹೋಗಿರುವ ಸಾರ್ವಜನಿಕರಿಗೆ ಪೊಲೀಸರು ಮತ್ತೊಂದು ಶಾಕ್ ನೀಡುತ್ತಿದ್ದಾರೆ. ದಾವಣಗೆರೆ ಪ್ರಮುಖ ರಸ್ತೆಯಲ್ಲಿ ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ವಶಕ್ಕೆ ಪಡಿಸಿಕೊಂಡು ದಂಡ ಹಾಕಲಾಗುತ್ತಿದೆ.
ನಗರದ ಬಿಪಿ ರಸ್ತೆಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎದುರು ಅರ್ಧ ಹೆಲ್ಮೆಟ್ ಹಾಕಿಕೊಂಡು ಬಂದ ವಾಹನ ಸವಾರನ್ನು ನಿಲ್ಲಿಸಿ ಹೆಲ್ಮೆಟ್ ವಶ ಪಡೆಯಲಾಗುತ್ತಿದೆ.
https://www.facebook.com/permalink.php?story_fbid=324198905673658&id=105586904201527
ಕಳೆದ 6 ತಿಂಗಳಲ್ಲಿ ಎಲ್ಲಾ ಬಗೆಯ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ತತ್ತರಿಸಿಹೋಗಿದ್ದಾರೆ, ಇಂತಹ ಸಂದರ್ಭದಲ್ಲಿ ಸರ್ಕಾರಗಳು ದಿನಕ್ಕೊಂದು ಕಾನೂನು ತರುತ್ತಾ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ.
ಗ್ರಾಮೀಣ ಜನತೆ ಬೇಸತ್ತು ನಗರಕ್ಕೆ ಬರುವುದನ್ನೇ ಬಿಟ್ಟು ಬಿಡುವಂತಾಗಿದೆ, ದುಡಿಮೆಯೇ ಇಲ್ಲದ ಇಂತಹ ಸಂದರ್ಭದಲ್ಲಿ ಹೊಸದಾಗಿ ಸಾವಿರಾರು ಕೊಟ್ಟು ಹೆಲ್ಮೆಟ್ ಖರೀದಿ ಸಾಧ್ಯವೇ, ನಿಮ್ಮ ಪ್ರಾಣ ಉಳಿಸಲು ನಮ್ಮ ಕಾನೂನು ಎಂಬ ಹೊಸ ನಾಟಕೀಯ ಮಾತುಗಳನ್ನು ಬಿಟ್ಟು, ವಾಸ್ತವ ಸ್ಥಿತಿ ಅರಿತು ಕಾನೂನು ಮಾಡಿದರೆ ಎಲ್ಲರಿಗೂ ಒಳ್ಳೆಯದಲ್ಲವೇ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಕೆ. ಎಲ್. ಹರೀಶ್, ಬಸಾಪುರ ಪ್ರಶ್ನಿಸಿದ್ದಾರೆ.