ಡಿವಿಜಿ ಸುದ್ದಿ, ದಾವಣಗೆರೆ : ಮಾರ್ಚ್ 26ರಂದು ಪಾಸಿಟಿವ್ ಕೇಸ್ ವರದಿಯಾದ ರೋಗಿ-63 ಅವರ ವಾಸಸ್ಥಳವಾದ ನಿಜಲಿಂಗಪ್ಪ ಬಡಾವಣೆಯ ಮನೆಯ ಸುತ್ತಲೂ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಘೋಷಿಸಲಾಗಿದೆ. ಇನ್ನು ಮನೆಯ ಸುತ್ತಲಿನ ಪ್ರದೇಶ 5 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ.
ನಿಯಂತ್ರಿತ ವಲಯ : ನಿಜಲಿಂಪ್ಪ ಬಡಾವಣೆಯ ಪೂರ್ವ- 2ನೇ ಕ್ರಾಸ್, 1ನೇ ಮೇನ್ ರಿಂದ 2ನೇ ಮೇನ್‍ವರೆಗೆ, ಪಶ್ಚಿಮ- 6ನೇ ಕ್ರಾಸ್, 1ನೇ ಮೇನ್ ರಿಂದ 2ನೇ ಮೇನ್‍ವರೆಗೆ, ಉತ್ತರ- ಅಮೃತಾ ವಿದ್ಯಾಲಯ ಶಾಲೆ 1ನೇ ಮುಖ್ಯ ರಸ್ತೆ, ದಕ್ಷಿಣ- 2ನೇ ಮುಖ್ಯ ರಸ್ತೆವರೆಗೆ ಕಾರ್ಯ ವಿಧಾನದ ಅನುಸಾರ ಕಾರ್ಯ ನಿರ್ವಹಿಸಲಾಗುವುದು.

ಕೋವಿಡ್-19 ವೈರಸ್ ನಿಯಂತ್ರಣ ದೃಷ್ಠಿಯಿಂದ ನಿಯಂತ್ರಿತ ವಲಯ, ಬಫರ್ ವಲಯಗಳನ್ನಾಗಿ ವಿಭಾಗಿಸಿ ಅವುಗಳ ನಿರ್ವಹಣೆಗಾಗಿ ಕಾರ್ಯತಂತ್ರ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಈ ಪ್ರದೇಶದಲ್ಲಿ ಹಿಂದಿನ ಬಾರಿ ಪಾಸಿಟಿವ್ ಪ್ರಕರಣ ವರದಿಯಾದ 28 ದಿನಗಳ ಅವಧಿಯಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ ಆ ಪ್ರದೇಶದಲ್ಲಿ ವರದಿಯಾಗಿರಬಾರದು ಅಥವಾ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸಕ್ರಿಯ ಗೃಹ ದಿಗ್ಭಂಧನಲ್ಲಿ ಇಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಘೋಷಣೆ ಮಾಡಲಾಗಿದೆ.
ಘಟನಾ ಕಮಾಂಡರ್ ನೇಮಕ: ಪ್ರತಿಯೊಂದು ನಿಯಂತ್ರಿತ ವಲಯಕ್ಕೆ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಒಂದನೇ ದರ್ಜೆಯ ಅಧಿಕಾರಿಗೆ ದಂಡಾಧಿಕಾರಿಯ ಅಧಿಕಾರಿಗಳನ್ನು ನೀಡಿ ಅವರನ್ನು ಘಟನಾ ನಿಯಂತ್ರಕನನ್ನಾಗಿ ನೇಮಿಸಬೇಕಾದ ಹಿನ್ನೆಲೆಯಲ್ಲಿ ಘಟನಾ ಕಮಾಂಡರ್ ಆಗಿ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.



