ಡಿವಿಜಿ ಸುದ್ದಿ, ದಾವಣಗೆರೆ: ಹರಿಹರ ತಾಲ್ಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕಾ ದೇವಿಯ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮ ನ.08 ರಂದು ಬೆಳಗ್ಗೆ 9.30 ಗಂಟೆಗೆ ನಡೆಯಲಿದೆ. ಇದರ ಜತೆಗೆ ಮಹೇಶ್ವರಿ ದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಜನ ಜಾಗೃತಿ ಸರ್ವಧರ್ಮ ಸಮಸ್ವಯ ಸಮಾರಂಭ ಸಹ ನಡೆಯಲಿದೆ ಎಂದು ಗ್ರಾಮಸ್ಥ ಹೆಚ್. ಶೇಖರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೦8 ರಂದು ಬೆಳಿಗ್ಗೆ 9.30 ರಿಂದ 10.30 ಕ್ಕೆ ಶ್ರೀ ದುರ್ಗಾಂಬಿಕಾ ಶಿಲಾಮೂರ್ತಿ ಪ್ರತಿಷ್ಠಾಪನಾವನ್ನು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ. ಶ್ರೀ ಮಹೇಶ್ವರಿ ದೇವಸ್ಥಾನದ ಕಳಸಾರೋಹಣವನ್ನು ಶ್ರೀ ವಿಶ್ವಾರಾಧ್ಯ ಕರಿಸಿದ್ದೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜಗದ್ಗುರು ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಬಸವ ಮಾಚಿದೇವ ಮಹಾಸ್ವಾಮಿಗಳು, ಯೋಗಸಿಂಹಾಸನಾಧೀಶ್ವರ ಪರಮಪೂಜ್ಯ ವಚನಾನಂದ ಸ್ವಾಮಿಗಳು, ನಿರಂಜನಾನಂದಪುರಿ ಸ್ವಾಮಿಗಳು, ವೇಮಾನಂದ ಸ್ವಾಮಿಗಳು ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಹರಿಹರ ಶಾಸಕ ಎಸ್. ರಾಮಪ್ಪನವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ದೇವರಬೆಳಕೆರೆ ಗ್ರಾಂ.ಪ ಅಧ್ಯಕ್ಷ ರಾಧಾ ಜುಂಜಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಶಾಸಕ ಡಾ. ಹೆಚ್.ಎಸ್. ಶಿವಶಂಕರ, ಮಾಜಿ ಶಾಸಕ ಬಿ.ಪಿ. ಹರೀಶ್, ಹರಿಹರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀದೇವಿ ಮಂಜಪ್ಪ, ಜಿ.ಪಂ ಸದಸ್ಯ ಬಿ.ಎಂ ವಾಗಿಸ್ವಾಮಿ ಸೇರಿದಂತೆ ಮತ್ತಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪರುಶುರಾಮ್, ಜುಂಜಪ್ಪ, ಮಹೇಶ್ವರಪ್ಪ, ನಿಂಗಪ್ಪ ಸೇರಿದಂತೆ ಮತ್ತಿತರರಿದ್ದರು.