ಡಿವಿಜಿ ಸುದ್ದಿ, ದಾವಣಗೆರೆ: ನಾಗರ ಪಂಮಿಯಲ್ಲಿ ಹುತ್ತಕ್ಕೆ ಹಾಲು ಹಾಕುವುದು ಸಾಮಾನ್ಯ. ಆದರೆ, ದಾವಣಗೆರೆ ನಗರದ 45ನೇ ವಾರ್ಡಿನ ಕರೂರು ಗ್ರಾಮದಲ್ಲಿ ನಾಗರ ಪಂಚಮಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.
ಇಲ್ಲಿನ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಹನುಮಂತಪ್ಪ ಕರೂರು, ಮಾರುತಿ, ಸಚಿನ್ ಸೇರಿಕೊಂಡು ಗ್ರಾಮದ ಮಕ್ಕಳಿಗೆ ಕುಡಿಯಲು ಹಾಲನ್ನು ನೀಡಿದ್ದಾರೆ. ಈ ಮೂಲಕ ನಾಗರ ಪಂಚಮಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.
ಮಕ್ಕಳಲ್ಲಿ ವೈಚಾರಿಕತೆ ಬಿತ್ತುವ ಉದ್ದೇಶದಿಂದ ಇಂತಹ ವಿಶಿಷ್ಟ ಆಚರಣೆ ಮಾಡಿದ್ದೇವೆ. ಹುತ್ತಕ್ಕೆ ಹಾಲು ಹಾಕುವುದರಿಂದ ಹಾಲು ವ್ಯರ್ಥವಾಗಿ ಹೋಗುತ್ತದೆ. ಅದೇ ಹಾಲನ್ನು ಮಕ್ಕಳಿಗೆ ನೀಡಿದರೆ, ಮಕ್ಕಳು ಕೂಡ ಸಂತೋಷದಿಂದ ಹಾಲು ಕುಡಿಯುತ್ತಾರೆ. ಇಂತಹ ವೈಚಾರಿಕತೆ ಬಿತ್ತುವುದರಿಂದ ಮಕ್ಕಳು ಕೂಡ ಮುಂದಿನ ದಿನಗಳಲ್ಲಿ ಜೀನದಲ್ಲಿ ಅಳವಡಿಸಿಕೊಳ್ಳಲಿ ಎಂಬುದು ನಮ್ಮ ಆಶಯ ಎಂದು ಹನುಮಂತಪ್ಪ ಹೇಳಿದರು.