ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಸಂಕಷ್ಟ ಹಾಗೂ ಲಾಕ್ ಡೌನ್ ಹೊಡೆತಕ್ಕೆ ತತ್ತರಿಸಿರುವ ಭಾರತದ ಆಥಿ೯ಕ ವ್ಯವಸ್ಥೆ ಸರಿಪಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಸ್ವಾವಲಂಬನೆಗಾಗಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆಯನ್ನು ಮಾಡಿರುವುದು ಪೊಳ್ಳು ಘೋಷಣೆ ಯಾಗಿದ್ದು, ಇದರಿಂದ ಭಾರತದ ಆಥಿ೯ಕ ಪುನಶ್ಚೇತನದ ನಿರೀಕ್ಷೆ ಹುಸಿಯಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ . ಬಸವರಾಜ್ ಹೇಳಿದ್ದಾರೆ.
ಈ ಹಿಂದೆ 2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ನಾಗರೀಕನಿಗೂ ಅವರ ಖಾತೆಗೆ ರೂ 15 ಲಕ್ಷ ತುಂಬುವುದಾಗಿ ಘೋಷಿಸಿದ್ದರು. ಮೋದಿಯವರ ಹೊಸ ಪ್ಯಾಕೇಜ್ ಸಹ ಅದೇ ರೀತಿ ಇದೆ. ನಮ್ಮ ದೇಶದ ಹಣಕಾಸಿನ ಇತಿವಿುತಿಯನ್ನು ನೋಡಿ ಭರವಸೆ ನೀಡಬೇಕಾಗಿದ್ದ ಪ್ರಧಾನ ಮಂತ್ರಿ ಗಳು ಹಳಿ ಇಲ್ಲದೇ ರೈಲು ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕೊರೊನಾ ವೈರಸ್ ಸಂಕಷ್ಟದಿಂದ ಕಂಗೆಟ್ಟಿರುವ ದೇಶದ ಜನರಿಗೆ ಆಸೆ ಹುಟ್ಟಿಸಿ ಅರಗಿನ ಅರಮನೆ ಕಟ್ಟಲು ಹೊರಾಟಿದ್ದಾರೆಂದು ಅವರು ಲೇವಡಿ ಮಾಡಿದ್ದಾರೆ.
2019 – 20 ರ ಭಾರತ ದೇಶದ ಬಜೆಟ್ ಗಾತ್ರದ ಮೊತ್ತ 27,86,349 ಲಕ್ಷ ಕೋಟಿ ಯಾಗಿತ್ತು. ಬಜೆಟ್ ನ ನಿಗದಿತ ಯೋಜನೆ ವೆಚ್ಚದಲ್ಲಿ ಶೇಕಡ 30 ರಷ್ಟು ಕಳೆದ ಸಾಲಿನಲ್ಲಿ ಕಡಿತಗೊಳಿಸಿದ್ದ ಉದಾಹರಣೆ ನಮ್ಮ ಮುಂದೆ ಇದೆ. ಪ್ರಸಕ್ತ ಸಾಲಿನ ಕೆಂದ್ರ ಬಜೆಟ್ ನ್ನು 2020 ರ ಫೆಬ್ರವರಿ 1ರಂದು ಮಂಡಿಸಲಾಗಿದ್ದೂ ಒಟ್ಟಾರೆ ಬಜೆಟ್ ಗಾತ್ರ 30,42,230 ಲಕ್ಷ ಕೋಟಿ ಎಂದು ತಿಳಿಸಲಾಗಿತ್ತು. ದೇಶದ ಒಟ್ಟಾರೆ ವಾಷಿ೯ಕ ಆದಾಯ 20 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿತ್ತು ಅದರೆ ಕಳೆದ 50 ದಿನಗಳಿಂದ ನೀರಿಕ್ಷತ ಆದಾಯ ಕೈಕೊಟ್ಟಿದೆ ಇಂತಹ ಸಂದರ್ಭದಲ್ಲಿ ಇದೀಗ ದೇಶದ ಸ್ವಾವಲಂಬನೆಗೆ ರೂ 20 ಲಕ್ಷ ಕೋಟಿ ಪ್ಯಾಕೇಜ್ ಎಂದು ಹೇಳಿರುವುದು ತಡ ಬುಡವಿಲ್ಲದ ಯೋಜನೆ ಯಾಗಿದೆ ಎಂದು ಅವರು ದೂರಿದಿದ್ದಾರೆ.



