ಡಿವಿಜಿ ಸುದ್ದಿ, ದಾವಣಗೆರೆ: ಸ್ವಪಕ್ಷೀಯರಾದ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ನಡುವೆ ಇಂದು ಏಕ ವಚನದಲ್ಲಿಯೇ ಮಾತಿನ ಚಕಮಕಿ ನಡೆದಿದೆ.
ಕುಡಿಯುವ ನೀರಿನ ಅನುದಾನ ವಿಚಾರವಾಗಿ ಸಂಸದ, ಶಾಸಕರ ನಡುವೇ ಏಕ ವಚನದಲ್ಲಿಯೇ ಮಾತಿನ ಚಕಮಕಿ ನಡೆದಿದೆ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರು ನಡುವೆ ಕೈ ಮಿಲಾಯಿಸುವ ಹಂತಕ್ಕೆ ಜಗಳ ಮಾಡಿದ್ದಾರೆ.
ಉಸ್ತುವಾರಿ ಸಚಿವ ಭೈರತಿ ಬಸವರಾಜ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೋವಿಡ್ ಕುರಿತು ಸಭೆ ನಡೆಸುತ್ತಿದ್ದರು. ಇವರ ಸಮ್ಮುಖದಲ್ಲಿ ಇಬ್ಬರೂ ನಾಯಕರೂ ಬೈದಾಡಿಕೊಂಡು ಆಸನದಿಂದ ಎದ್ದು ಕೈ ಮಿಲಾಯಿಸುವ ಹಂತ ತಲುಪಿದೆ. ಆಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿದ್ದಾರೆ.
https://www.facebook.com/permalink.php?story_fbid=234370717989811&id=105586904201527
ಕುಡಿವ ನೀರಿನ ಸಮಸ್ಯೆಯನ್ನು ಶಾಸಕ ವಿರುಪಾಕ್ಷಪ್ಪ ಪ್ರಸ್ತಾಪಿಸಿದರು. ಆಗ ಜಿಲ್ಲಾ ಪಂಚಾಯ್ತಿ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ ಕುಡಿಯುವ 20 ಲೀಟರ್ ನೀರಿನ ದರವನ್ನು 5 ರೂಪಾಯಿ ದರ ಹೆಚ್ಚಳ ಮಾಡದಿದ್ದರೆ, ಗ್ರಾಮ ಪಂಚಾಯ್ತಿಯೇ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಆಗ ಶಾಸಕರು ಗ್ರಾಮ ಪಂಚಾಯ್ತಿಗಳಲ್ಲಿ ದುಡ್ಡು ಏಲ್ಲಿ ಇದೆ. ಸರ್ಕಾರ ಎಲ್ಲೋ ಕುಳಿತುಕೊಂಡು ಕುಡಿಯುವ ನೀರಿನ ದರವನ್ನು 5 ರೂಪಾಯಿ, 10 ರೂಪಾಯಿ ಹೆಚ್ಚಿಸಿದರೆ ಎಲ್ಲಿಂದ ತರಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಕೇಳಿದರು. ಆಗ ಮಧ್ಯ ಪ್ರವೇಶಿಸಿದ ಸಂಸದ ಸಿದ್ದೇಶ್ವರ, ಗ್ರಾಮ ಪಂಚಾಯ್ತಿಗಳಿಗೆ ಅನುದಾನ ಇಲ್ಲ ಅಂದ್ರೆ ಉಸ್ತುವಾರಿ ಸಚಿವರಿಗೆ ಹೇಳಿ ಹಾಕಿಸಿಕೋ… ಅದನ್ನು ಬಿಟ್ಟು ಸರ್ಕಾರದದಲ್ಲಿ ಅನುದಾನ ಇಲ್ಲ ಅಂದ್ರೆ ಹೇಗೆ..? ಎಲ್ಲದು ನಿನಗೆ ಪುಕ್ಸಾಟೆನೇ ಆಗಬೇಕು ಅಂತಾ ಸಂಸದರು ಹೇಳಿದರು.
ಆಗ ಸಿಟ್ಟಿಗೆದ್ದ ಶಾಸಕ ವಿರುಪಾಕ್ಷಪ್ಪ ಪುಕ್ಸಾಟೆ ಕೊಡು ಅಂತಾ ಕೇಳಿಲ್ಲ, ಸುಮ್ಮನೆ ಕೊತ್ಕೊಳಯ್ಯಾ ಎಂದರು. ಸಂಸದರು ಏ ಏನೋ ಮಾತಾಡ್ತೀಯಾ ನೀನು ಎಂದು ಶಾಸಕರ ಬಳಿ ಎದ್ದು ಬಂದಿದ್ದಾರೆ. ಏ ಕುತ್ಕೊಳ್ಳೋ ನೀನು, ನಿಂದೇನೋ ಎಂದ ಶಾಸಕ ಮಾಡಾಳು ವಿರುಪಾಕ್ಷಪ್ಪ ಏರು ಧ್ವನಿಯಲ್ಲಿ ತಿರುಗೇಟು ನೀಡಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಎಸ್ಪಿ ಹನುಮಂತರಾಯ ಬೈದಾಟ ತಿಳಿಗೊಳಿಸಿದ್ದಾರೆ.



