ಡಿವಿಜಿ ಸುದ್ದಿ, ದಾವಣಗೆರೆ : ಜಿಲ್ಲೆಯಲ್ಲಿ ಇಂದು ಒಂದೇ ದಿನ 21 ಪಾಸಿಟಿವ್ ಪ್ರಕರಣ ಬಂದಿದ್ದರಿಂದ ಆತಂಕ ಮೂಡಿದ್ದು, ನಗರದ ಬಫರ್ ಝೋನ್ ನಲ್ಲಿ ಮದ್ಯ , ಅರ್ಥಿಕ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಸೂಚಿಸಿದರು.
ಜಿಲ್ಲೆಯಲ್ಲಿ 21 ಪ್ರಕರಣ ಪತ್ತೆಯಾದ ಹಿನ್ನೆಲೆ ಸಂಸದ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮದ್ಯದಂಗಡಿ ಮತ್ತು ಇನ್ನಿತರೆ ಆರ್ಥಿಕ ಚಟುವಟಿಕೆ ಆರಂಭಿಸಿದರೆ ಜನದಟ್ಟಣೆ ನಿಯಂತ್ರಣದೊಂದಿಗೆ ಕೊರೊನಾ ನಿಯಂತ್ರಣ ಕಷ್ಟಸಾಧ್ಯವಾಗುವುದರಿಂದ ಬಫರ್ ಝೋನ್‍ನ ವ್ಯಾಪ್ತಿಗೆ ಬರುವ ಪಾಲಿಕೆಯ 45 ವಾರ್ಡುಗಳಲ್ಲಿ ಮದ್ಯದಂಗಡಿ ಮತ್ತು ಇನ್ನಿತರೆ ಆರ್ಥಿಕ ಚಟುವಟಿಕೆಯನ್ನು ಬಂದ್ ಮಾಡಬಹುದೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಹೆಚ್ಚು ದಾಖಲಾದಲ್ಲಿ ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಸಂಪೂರ್ಣ ಸೀಲ್‍ಡೌನ್ ಮಾಡಬೇಕೆಂದು ಸೂಚಿಸಿದರು



