ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಪಟ್ಟಿಯಲ್ಲಿ ದಾವಣಗೆರೆ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ಗೆ ಬಂದಿದೆ. ಜನರು ಇದೇ ಖುಷಿಯಲ್ಲಿ ಮೈಮರೆಯುವಂತಿಲ್ಲ. ಇನ್ನೊಂದು ತಿಂಗಳಲ್ಲಿ ಕೊರೊನಾ ಮುಕ್ತ ಮಾಡಲು ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಕರೆ ನೀಡಿದರು.
ನಗರ ಜಿಎಂಐಟಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೇ.3 ವರೆಗೆ ಲಾಕ್ ಡೌನ್ ಇರಲಿದ್ದು, ಎಲ್ಲರು ಮನೆಯಲ್ಲಿಯೇ ಇರಬೇಕು. ಮಾಸ್ಕ್ ಧರಿಸಬೇಕು. ಆರ್ಥಿಕತೆ ಚೇತರಿಕೆ ದೃಷ್ಠಿಯಿಂದ ದೊಡ್ಡ ದೊಡ್ಡ ಅಂಗಡಿ, ಮಾಲ್, ಹೋಟೆಲ್, ತೆರೆಯದೇ ಸಣ್ಣ ಸಣ್ಣ ಬಟ್ಟೆ ಅಂಗಡಿ, ಬಂಗಾರದ ಅಂಗಡಿ ತೆರೆಯಲು ಮುಖ್ಯಂತ್ರಿಗಳು ಅನುಮತಿ ಕೊಟ್ಟಿದ್ದಾರೆ. ಇನ್ನು ಬಾರ್, ಹೇರ್ ಕಟ್ಟಿಂಗ್, ಮಾಲ್ ತೆರೆಯಲು ಸರ್ಕಾರ ಮಾರ್ಗ ಸೂಚಿ ನೀಡುವವರೆಗೂ ಅವಕಾಶವಿಲ್ಲ. ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಓಡಾಡಬೇಕು ಎಂದರು.
ಗ್ರೀನ್ ಝೋನ್‍ಗಳಾಗಿರುವ ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ನಡುವೆ ಸಾರಿಗೆ ಓಡಾಟಕ್ಕೆ ಅವಕಾಶ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದು ಕೇಳಿದ್ದೆ, ಆದರೆ ಮೇ 3 ರವರೆಗೆ ಅಂತರ್ ಜಿಲ್ಲೆ ಓಡಾಟ ಬೇಡ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ನಿರ್ಬಂಧ ಸಡಿಲಿಕೆ ನಂತರ ನಗರದಲ್ಲಿ ಹಾರ್ಡ್‍ವೇರ್, ಪ್ಲೈವುಡ್, ಬುಕ್ ಶಾಪ್‍ಗಳನ್ನು ಆರಂಭಿಸಲಾಗಿದೆ. ಖಾಸಗಿ ಕಟ್ಟಡ ನಿರ್ಮಾಣ ಆರಂಭಿಸಿದಲ್ಲಿ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಆಧಾರಿತ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ ಇನ್ನು ಮುಂದೆಯೂ ನಿಯಮಾನುಸಾರ ಸಾಮಾಜಿಕ ಅಂತರ ಕಾಯ್ದುಕೊಂಡು ಆರ್ಥಿಕ ಚಟುವಟಿಕೆಗಳನ್ನು ನಡೆಸಬೇಕು ಎಂದರು.
ಜಿಲ್ಲಾಸ್ಪತ್ರೆಯಲ್ಲಿ 90 ಲಕ್ಷ ವೆಚ್ಚದಲ್ಲಿ ಕೊರೊನಾ ವೈರಸ್ ಪರೀಕ್ಷ ಲ್ಯಾಬ್ ತೆರೆಯಲು ಅನುದಾನ ನೀಡಲಾಗಿದೆ. ಮೇ 4ರೊಳಗೆ ಪ್ರಾರಂಭವಾಗಲಿದೆ. ಏ.30 ರಂದು ಎಸ್ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಕೊರೊನಾ ಲ್ಯಾಬ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.



