ಡಿವಿಜಿ ಸುದ್ದಿ, ದಾವಣಗೆರೆ: ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಯಾದ್ರೆ ಬೇಡ ಎನ್ನುವುದಕ್ಕೆ ಆಗುತ್ತಾ..? ಹಾಗೆಯೇ ನಮ್ಮ ಜಿಲ್ಲೆಯವರೇ ಸಚಿವರಾಗಿ, ಉಸ್ತುವಾರಿಯೂ ಆಗಲಿ ಬಿಡಿ ಎಂದು ಸಂಸದ ಜಿ.ಎಂ. ಸಿದ್ದೇಶರ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಕುರಿತು ರೇಣುಕಾಚಾರ್ಯ ನಿವಾಸದಲ್ಲಿ ನಡೆದ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ. ಸಭೆಗೆ ನನ್ನನ್ನು ಕರೆದಿಲ್ಲ ಎಂದರು.
ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಸಿಎಂ
ಸಿಎಂ ಯಡಿಯೂರಪ್ಪ ಅವರು ಮುಂದಿನ ಮೂರು ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರ್ತಾರೆ. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ನಮ್ಮ ಪಕ್ಷದ ಶಾಸಕರು ಪತ್ರ ಬರೆದಿಲ್ಲ. ವಿರೋಧ ಪಕ್ಷದವರು ಆರೋಪದ ಮಾಡಬೇಕು ಅಂತ ಮಾಡಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.
ನಮ್ಮಲ್ಲಿ ಮೂಲ, ವಲಸೆ ಎಂಬುದಿಲ್ಲ. ಒಮ್ಮೆ ಪಕ್ಷಕ್ಕೆ ಬಂದ ಮೇಲೆ ಎಲ್ಲರೂ ಮೂಲ ಬಿಜೆಪಿಯವರು. ಎಚ್. ವಿಶ್ವನಾಥ್‌ಗೆ ಪಕ್ಷದ ಸಿದ್ದಾಂತ ಗೊತ್ತಿದೆ. ಮಾಧ್ಯಮದವರು ಏನೋ ಕೇಳಿದಾಗ ಏನೋ ಹೇಳಿರಬಹುದು ಎಂದರು.
.



