ಡಿವಿಜಿ ಸುದ್ದಿ, ಚನ್ನಗಿರಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಾಲೂಕಿನ ಹಿರೇ ಕೋಗಲೂರು ಗ್ರಾಪಂ ವ್ಯಾಪ್ತಿಯ ಕೋಗಲೂರು , ಗಿರಿಯಾಪುರ , ಚಿಕ್ಕ ಕೋಗಲೂರು ಗ್ರಾಮಗಳ 500 ಬಡವವರಿಗೆ ಆಹಾರ ಕಿಟ್ ಗಳನ್ನು ಶಾಸಕ ವಿರೂಪಾಕ್ಷಪ್ಪವಿತರರಿಸಿದರು.
ತಾಲೂಕಿನದ್ಯಾಂತ ಪ್ರತಿ ಗ್ರಾಮಗಳಿಗೆ ಬೇಟಿ ಮಾಡಿ ಗ್ರಾಮದ ಮುಖಂಡರುಗಳು ಆಯ್ಕೆ ಮಾಡಿದಂತಹ ಬಡವರಿಗಾಗಿ ಆಹಾರ ಕಿಟ್ ನ್ನು ವಿತರಣೆ ಮಾಡುತಿದ್ದೇವೆ. ಲಾಕ್ ಡೌನ್ ನಿಂದಾಗಿ ಕೂಲಿ ಕೆಲಸವಿಲ್ಲದೆ ಮನೆಯಲ್ಲಿರುವಂತಹ ಕಾರ್ಮಿಕರು ಮತ್ತು ಬಡವರಿಗಾಗಿ ಆಹಾರ ಕಿಟ್ಟುಗಳ ಖರೀದಿಗಾಗಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಮತ್ತು ಶಾಸಕರ ಅನುದಾನವನ್ನು ಬಳಸಿಕೊಂಡು ಕಿಟ್ ಗಳಖನ್ನು ವಿತರಿಸಿದ್ದೇವೆ ಎಂದರು.

ಸಾರ್ವಜನಿರು ಮನೆಯಲ್ಲಿಯೇ ಇರಬೇಕು. ಸರ್ಕಾರದ ನಿಯಮಗಳನ್ನಾ ತಪ್ಪದೆ ಪಾಲಿಸಬೇಕು. ಸರ್ಕಾರ ನಿಮ್ಮೊಂದಿಗೆ ಇದೆ. ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು. ಮಹಾಮಾರಿ ಕೊರೋನ ರೋಗವನ್ನು ದೇಶದಿಂದ ಓಡಿಸಬೇಕೆಂದರೆ ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಗಿರೀಶ್ , ತಾಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ , ವೃತ್ತ ನಿರೀಕ್ಷಕ ಆರ್. ಆರ್ ಪಾಟೀಲ್ , ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿ , ಹೆಚ್ ಯು ಮಲ್ಲಿಕಾರ್ಜುನ , ಜಗದೀಶ್ ಗೌಡ , ಶರಣಪ್ಪ ಎಸ್ ಬಿ ಗ್ರಾಪಂ ಅಧ್ಯಕ್ಷ ಅನುಭಾಗ್ಯಮ್ಮ , ಉಪಾಧ್ಯಕ್ಷ ಶಂಕರಮ್ಮ , ಚಿದಾನಂದಯ್ಯ , ಸುನಿಲ್ , ರಾಜಶೇಖರಪ್ಪ ಉಪಸ್ಥಿತರಿದ್ದರು.



