ಡಿವಿಜಿ ಸುದ್ದಿ, ದಾವಣಗೆರೆ: ನಮಗೆಲ್ಲ ಮೈಸೂರಿನ ರಾಜರು ಯಾರು ಅಂತಾ ಕೇಳಿದ್ರೆ, ನಾನು ಮೈಸೂರಿನ ಅರಸರ ಹೆಸರು ಹೇಳುತ್ತೇನೆ. ಆದರೆ, ಇದೇ ಮಾತನ್ನಾ ನೀವು ಸಿದ್ದರಾಮಯ್ಯ ಅವರಿಗೆ ಕೇಳಿದ್ರೆ, ಅವರು ಟಿಪ್ಪು ಸುಲ್ತಾನ್ ಎಂದು ಹೇಳುತ್ತಾರೆ ಅಂತಾ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದರು.
ನನಗೆ ವೋಟಿನ ರಾಜಕಾರಣ ಏನ್ ಬೇಡ. ಟಿಪ್ಪು ಕೇವಲ ಬ್ರಿಟಿಷ ರ ಜೊತೆಯಲ್ಲಿ ಅಷ್ಟೇ ಅಲ್ಲ ಮೈಸೂರಿನ ಒಡೆಯರ ಜೊತೆಯಲ್ಲಿ ಕೂಡ ಸಂಘರ್ಷ ಇತ್ತು.. ಹಾಗಾದ್ರೆ, ಕಾಂಗ್ರೆಸ್ ಯಾರ ವಾರಸುದಾರಿಕೆಯನ್ನು ಕಾಂಗ್ರೆಸ್ ಬಯಸುತ್ತದೆ. ಮೈಸೂರು ಅರಸರ ವಾರಸುದಾರಿಕೆಯನ್ನಾ ಅಥವಾ ಟಿಪ್ಪು ಸುಲ್ತಾನ ವಾರಸುದಾರಿಕೆಯನ್ನ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ನಾನು ಮೈಸೂರಿನ ಅರಸರ ವಾರಸೂದಾರಿಕೆಯನ್ನು ಒಪ್ಪುತ್ತೇನೆ. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಮಾತ್ರ ಟಿಪ್ಪುವಿನ ವಾರಸುದಾರಿಕೆಯನ್ನು ಒಪ್ಪುತ್ತದೆ ಎಂದರು.