ಡಿವಿಜಿ ಸುದ್ದಿ, ದಾವಣಗೆರೆ : ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಮಾಧ್ಯಮ ಕ್ಷೇತ್ರಕ್ಕೂ ಅಪಾರ ನಷ್ಟ ಉಂಟಾಗಿದೆ. ಕೆಂದ್ರ ಹಾಗೂ ರಾಜ್ಯ ಸರ್ಕಾರ ಗಳು ಮಾಧ್ಯಮ ಕ್ಷೇತ್ರಕ್ಕೆ ಆಥಿ೯ಕ ಪ್ಯಾಕೇಜ್ ಘೋಷಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಆಗ್ರಹಿಸಿದ್ದಾರೆ.
ಸತತ 50 ದಿನಗಳ ಲಾಕ್ ಡೌನ್ ನಿಂದ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಿದ ಪರಿಣಾಮವಾಗಿ 32 ಪುಟ , 24 ಪುಟಗಳ ದಿನ ಪತ್ರಿಕೆಗಳು ಇಂದು ಕೆವಲ 10 ಪುಟಗಳಾಗಿ ಹೊರ ಬರುತ್ತಿವೆ. ಇದೇ ರೀತಿ ಮುಂದುವರಿದರೆ ಆಥಿ೯ಕ ಸಂಕಷ್ಟ ಹಾಗೂ ನ್ಯೂಸ್ ಪ್ರಿಂಟ್ ಕೊರತೆಯಿಂದಾಗಿ ಪತ್ರಿಕೆಗಳೆ ಸಂಪೂರ್ಣ ವಾಗಿ ನಿಂತರು ಅಚ್ಚರಿ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮುದ್ರಣ ಮಾಧ್ಯಮ ಮತ್ತು ಸುದ್ದಿ ವಾಹಿನಿಗಳಲ್ಲಿ ಜೀವದ ಹಂಗು ತೊರೆದು 24 / 7 ದುಡಿಯುತ್ತಿರುವ ಪತ್ರಕರ್ತರುಗಳ ಪೈಕಿ ಅನೇಕರು ತಮ್ಮ ಉದ್ಯೋಗಗಳನ್ನು ಕಳೆದು ಕೊಂಡಿದ್ದಾರೆ. ಬಹುತೇಕ ಮಾಧ್ಯಮ ದವರಿಗೆ ವೇತನ ಕಡಿತ ಗೊಳಿಸಲಾಗಿದೆ.
ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರಕ್ಕೆ ಕೆಂದ್ರ ಮತ್ತು ರಾಜ್ಯ ಸಕಾ೯ರಗಳು ವಿಶೇಷ ಆಥಿ೯ಕ ಪ್ಯಾಕೇಜ್ ಘೋಷಿಸ ಬೇಕು ಮಾಧ್ಯಮಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರತಿನಿಧಿಗಳಿಗೆ ಅವರ ನೌಕರಿಗೆ ಚ್ಯುತಿಯಾಗದಂತೆ ಸೇವಾ ಭದ್ರತೆ ಹಾಗೂ ವೇತನ ಇತರೆ ಸೌಲಭ್ಯ ಗಳಿಗಾಗಿ ಕಾಯ್ದೇ ರೂಪಿಸಬೇಕು ಕೊರೊನಾ ವಾರಿಯರ್ಸಗೆ ರೂ. 50 ಲಕ್ಷದ ಜೀವ ವಿಮೆಯನ್ನು ಸಕಾ೯ರ ಘೋಷಿಸಿದ್ದು ಇದರ ವ್ಯಾಪ್ತಿಗೆ ಸುದ್ದಿ ವಾಹಿನಿ ಹಾಗೂ ಮುದ್ರಣ ಮಾಧ್ಯಮದ ಎಲ್ಲಾ ಹಂತದ ಉದ್ಯೋಗಿಗಳಿಗೂ ಸೇರ್ಪಡೆ ಮಾಡಬೇಕು.
ಸಕಾ೯ರ ಮತ್ತು ಆಡಳಿತದವರು ಪತ್ರಿಕಾ ಪ್ರತಿನಿಧಿ ಗಳಿಗೆ ಗುಣಮಟ್ಟದ ಮಾಸ್ಕ್ , ಸ್ಯಾನಿಟೈಜರ್ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕೆಂದು ಡಿ. ಬಸವರಾಜ್ ಮನವಿ ಮಾಡಿದ್ದಾರೆ.



