ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಿಶೇಷ ಚೇತನ ಯುವಕ ಮೆಕ್ಕೆಜೋಳಕ್ಕೆ ಕನಿಷ್ಟ 2 ಸಾವಿರ ಬೆಲೆ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾನೆ.
ಹೊನ್ನಾಳಿ ತಾಲ್ಲೂಕಿನ ಎಂ . ಹನುಮನಹಳ್ಳಿಯ ವಿಶೇಷ ಚೇತನ ಯುವಕ ಚನ್ನೇಶ್ ತಂದೆ 100 ರಿಂದ 150 ಕ್ವಿಂಟಲ್ ಮೆಕ್ಕೆಜೋಳ ಬೆಳೆದಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಸಂಕಷ್ಟದಲ್ಲಿ ಇದ್ದೇವೆ. ಈ ಹಿಂದೆ ಮಕ್ಕೆಜೋಳದ ಬೆಲೆ 2 ಸಾವಿರ ಇತ್ತು. ಆದರೆ, ಈಗ ಕೇವಲ 1300 ರಿಂದ 1400ಕ್ಕೆ ಕುಸಿದಿದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರನ್ನು ಕನಿಷ್ಟ 2 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದ್ದಾನೆ.
https://www.facebook.com/permalink.php?story_fbid=232272141533002&id=105586904201527



