ಡಿವಿಜಿ ಸುದ್ದಿ, ದಾವಣಗೆರೆ: ತುಂಗಭದ್ರಾ ನದಿ ಪಾತ್ರದಲ್ಲಿ ನೀರಿನ ಹರಿವು ತುಂಬಾ ಕಡಿಮೆಯಾಗಿದ್ದು, ರಾಜನಹಳ್ಳಿಯ 2ನೇ ಹಂತದ ನೀರು ಸರಬರಾಜು ಕೇಂದ್ರದ ಜಾಕ್ವೆಲ್ ಪಂಪ್ಹೌಸ್ನಲ್ಲಿ ಪಂಪ್ಗಳಿಗೆ ನೀರು ಸಿಗುತ್ತಿಲ್ಲವಾದ್ದರಿಂದ ಪಂಪ್ಗಳು ನಿಲ್ಲಿಸಲಾಗಿದೆ. ಹೀಗಾಗಿ ನಗರದ ಶೇಕಡ 60% ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಕುಂದುವಾಡ ಮತ್ತು ಟಿವಿ ಸ್ಟೇಷನ್ ಕೆರೆಯ ನೀರನ್ನು ನಗರಕ್ಕೆ ಸರಬರಾಜು ಮಾಡಲು ಯೋಜಿಸಲಾಗಿದೆ. ಹೀಗಾಗಿ ಹಾಲಿ ಪೂರೈಸುತ್ತಿರುವ ನೀರಿನ ಸರದಿಯಲ್ಲಿ ವ್ಯತ್ಯಯವಾಗಲಿದ್ದು ನಾಗರಿಕರು ಮಹಾನಗರಪಾಲಿಕೆಯೊಂದಿಗೆ ಸಹಕರಿಸಬೇಕು. ನದಿಯ ನೀರನ್ನು ಕುಡಿಯುವುದಕ್ಕೆ ಉಪಯೋಗಿಸಿ, ಬಳಸುವುದಕ್ಕೆ ಬೊರ್ವೆಲ್ ನೀರನ್ನು ಉಪಯೋಗಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಪ್ರಕಟಣೆಯಲ್ಲಿ ತಿಳಿದ್ದಾರೆ.