Connect with us

Dvgsuddi Kannada | online news portal | Kannada news online

ನಲ್ಲಿಗಳಿಗೆ ನೇರವಾಗಿ ಮೋಟಾರ್ ಅಳವಡಿಸಿದರೆ ದಂಡ

ದಾವಣಗೆರೆ

ನಲ್ಲಿಗಳಿಗೆ ನೇರವಾಗಿ ಮೋಟಾರ್ ಅಳವಡಿಸಿದರೆ ದಂಡ

ಡಿವಿಜಿ ಸುದ್ದಿ, ದಾವಣಗೆರೆ: ಸಾರ್ವಜನಿಕರು  ನಲ್ಲಿಗಳಿಗೆ ನೇರವಾಗಿ  ಮೋಟಾರ್ ಅಳವಡಿಸುವುದು ಹಾಗೂ  ರಸ್ತೆಗೆ ನೀರು ಹರಿಸುತ್ತಿರುವುದು ಕಂಡು ಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ನಗರಕ್ಕೆ ಪ್ರತಿದಿನ 2ನೇ ಹಂತದ ನೀರು ಸರಬರಾಜು ಕೇಂದ್ರದಿಂದ 40 ಎಂ.ಎಲ್.ಡಿ. ಹಾಗೂ ಟಿ.ವಿ. ಸ್ಟೇಷನ್ ಪಂಪ್‍ಹೌಸ್‍ನಿಂದ 18 ಎಂ.ಎಲ್.ಡಿ.  ಪ್ರತಿದಿನ 5 ಕೋಟಿ 80 ಲಕ್ಷ ಲೀಟರ್ ನೀರನ್ನು ಸರಬರಾಜು ಮಾಡುತ್ತಿದ್ದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಪರಿಶೀಲಿಸಿದಾಗ ಸಾರ್ವಜನಿಕರು ನೀರು ವಿತರಣಾ ಪೈಪಿಗೆ ಮೋಟಾರ್ ಅಳವಡಿಸುತ್ತಿರುವುದು ಹಾಗೂ ನೀರನ್ನು ರಸ್ತೆಗೆ ಪೋಲು ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಪರಿಶೀಲನೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ನೀರನ್ನು ರಸ್ತೆಗೆ ಪೋಲು ಮಾಡುವವರ ಮೋಟಾರನ್ನು ಜಪ್ತು ಮಾಡಲಾಗುವುದು ಮತ್ತು ಸ್ಥಳದಲ್ಲೇ ದಂಡ ವಿಧಿಸಲಾಗುವುದ.  ಮನೆಯ ನಳ ಜೋಡಣೆಯನ್ನು ಬಂದ್ ಮಾಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ  ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top