ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಬಿಜೆಪಿಯ ಬಿ.ಜಿ. ಅಜಯ್ ಕುಮಾರ್ ನೂತನ ಮೇಯರ್ , ಉಪಮೇಯರ್ ಆಗಿ ಸೌಮ್ಯ ನರೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.
45 ಪಾಲಿಕೆ ಸದಸ್ಯರು, 14 ಎಂಎಲ್ಸಿ, 2 ಶಾಸಕರು , 1 ಸಂಸದರು ಸೇರಿ ಒಟ್ಟು 62 ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಬಿಜೆಪಿ ಮೇಯರ್ ಅಭ್ಯರ್ಥಿ ಅಜಯ್ ಕುಮಾರ್ ಪರ 31 ಮತಗಳು, ಕಾಂಗ್ರೆಸ್ ದೇವರಮನಿ ಶಿವಕುಮಾರ್ ಪರ 28 ಮತಗಳು ಇದ್ದ ಕಾರಣ ಅಜಯ್ ಕುಮಾರ್ ಮೇಯರ್ ಆಗಿ ಆಯ್ಕೆಯಾದರು.

ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಪಕ್ಷದ ಮೂರು ಸದಸ್ಯರ ಗೈರು ಹಾಜರಾಗಿ ಶಾಕ್ ಕೊಟ್ಟಿದ್ದರು. ಇನ್ನು ಜಿಲ್ಲಾಧಿಕಾರಿ ಹಾಗೂ ಆಯುಕ್ತರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಮತದಾನ ಬಹಿಷ್ಕರಿ ಹೊರ ನಡೆದರು. ಕಾಂಗ್ರೆಸ್ ಜೆ.ಎನ್.ಶ್ರೀನಿವಾಸ, ಪತ್ನಿ ಶ್ವೇತಾ ಶ್ರೀನಿವಾಸ್ ಮತ್ತು ಯಶೋಧ ಉಮೇಶ್ ಗೈರು ಹಾಜರಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದರು. ಕಾಂಗ್ರೆಸ್ 3 ಸದಸ್ಯರು ಗೈರು ಹಾಜರಾತಿಯಿಂದ ಬಿಜೆಪಿ ಗೆಲುವಿನ ನಗೆ ಬೀರಿತು. ಕಾಂಗ್ರೆಸ್ ಶಾಸಕರು, ಎಂ ಎಲ್ ಸಿ ಹಾಗೂ ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಹೊರ ನಡೆದರು.



