ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಗಿಡ, ಪೊದೆ, ಘನ ತ್ಯಾಜ್ಯ , ಕಸ ಹಾಕುವುದು ಕಂಡುಬಂದಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನ ಹೊಂದಿರುವ ಸ್ವತ್ತಿನ ಮಾಲೀಕರು ತಮ್ಮ ತಮ್ಮ ನಿವೇಶನಗಳನ್ನು ಸ್ಚಚ್ಚಗೊಳಿಸದಿದ್ದಲ್ಲಿ ದಂಡ ಹಾಕುವ ಎಚ್ಚರಿಕೆ ನೀಡಿದೆ.
ನಗರದಲ್ಲಿ ಖಾಲಿ ನಿವೇಶನ ಹೊಂದಿದ ಮಾಲೀಕರು, ಸ್ಚಚ್ಚಗೊಳಿಸುವಲ್ಲಿ ವಿಫಲರಾದರೆ, ಅಂತಹವರಿಂದ ನಿಯಮಾನುಸಾರ ದಂಡವನ್ನು ವಸೂಲು ಮಾಡಿಕೊಳ್ಳಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ ಪಿ ಮುದಜ್ಜಿ ತಿಳಿಸಿದ್ದಾರೆ



