ಡಿವಿಜಿ ಸುದ್ದಿ, ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ.
ಸಾಮಾನ್ಯ ವರ್ಗಕ್ಕೆ ಮೇಯರ್, ಎಸ್ಸಿ ಮಹಿಳೆ ವರ್ಗಕ್ಕೆ ಉಪಮೇಯರ್ ಸ್ಥಾನ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ 45 ವಾರ್ಡ್ ಹೊಂದಿರುವ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಆಗಿ ಸಾಮಾನ್ಯ ವರ್ಗ ಗದ್ದುಗೆ ಹಿಡಿಯಲಿದೆ.
ದಾವಣಗೆರೆ ಮಹಾನಗರ ಪಾಲಿಕೆ ಅತಂತ್ರ ಸ್ಥಿತಿಯಲ್ಲಿದ್ದು ಕಾಂಗ್ರೆಸ್ 23, (1ಬಂಡಾಯ), ಬಿಜೆಪಿ 21(4 ಬಂಡಾಯ), ಜೆಡಿಎಸ್ 1 ಸದಸ್ಯರು ಚುನಾಯಿತರಾಗಿದ್ದಾರೆ. ಮ್ಯಾಜಿಕ್ ನಂಬರ್ 23 ಆಗಿದ್ದು, ಕಾಂಗ್ರೆಸ್ 22 ಸದಸ್ಯರ ಜೊತೆ ಕಾಂಗ್ರೆಸ್ ಬಂಡಾಯ ಸದಸ್ಯರನ್ನು ಸೇರಿಸಿಕೊಂಡರೆ ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾಗಿದೆ. ಇನ್ನು ಬಿಜೆಪಿ ಕೂಡ ಅಧಿಕಾರ ಹಿಡಿಯುವ ಉತ್ಸುಕದಲ್ಲಿದ್ದು, ಬಂಡಾಯ ಅಭ್ಯರ್ಥಿ ಸೆಳೆಯಲು ತೀವ್ರ ಕಸುರತ್ತು ನಡೆಸುತ್ತಿದೆ. ಈ ಮೂಲಕ ಯಾರು ದಾವಣಗೆರೆ ಮಹಾನಗರ ಪಾಲಿಕೆ ಗದ್ದುಗೆ ಯಾರು ಹಿಡಿಯುತ್ತಾರೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ.