ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 24 ನೇ ವಾರ್ಡ್ ಎಂಸಿಸಿ `ಎ’ ಬ್ಲಾಕ್ ಮತ್ತು ಪಿಜೆ ಬಡಾವಣೆಯ ಬಿಜೆಪಿ ಅಭ್ಯರ್ಥಿ ಪ್ರಸನ್ನ ಕುಮಾರ್ ಅವರು ಕಾಯಂ ವಿಳಾಸ ಇದೀಗ ವಾರ್ಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಒಂದು ವಿಳಾಸ, ಕರಪತ್ರದಲ್ಲಿ ಮತ್ತೊಂದು ವಿಳಾಸ ನಮೂದಿಸಿ ಮತದಾರರಲ್ಲಿ ಗೊಂದಲ ಉಂಟು ಮಾಡಿದ್ರಾ..?
ಪ್ರಸನ್ನ ಕುಮಾರ್ ಕಾಯಂ ವಿಳಾಸ ಗೊಂದಲದ ಬಗ್ಗೆ ವಾರ್ಡ್ ನಲ್ಲೊಂದು ಕರ ಪತ್ರ ಹರಿದಾಡುತ್ತಿದ್ದು, ಸ್ಥಳೀಯ ಅಭ್ಯರ್ಥಿ ಅಲ್ಲದಿದ್ದರೂ, ಸ್ಥಳೀಯ ನಿವಾಸಿ ಎಂದು ಮತಯಾಚನೆ ಮಾಡಿ ಕಾಯಂ ವಿಳಾಸ ಮರೆಮಾಚಿಸಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಪ್ರಸನ್ನ ಕುಮಾರ್ ಕೆ. ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ವಿಳಾಸ: #872 ದೇವರಾಜ್ ಅರಸ್ ಬಡಾವಣೆ `ಎ’ ಬ್ಲಾಕ್, ದಾವಣಗೆರೆ ಎಂದು ನಮೂದಿಸಿದ್ದಾರೆ. ಅದೇ ಮತದಾರರಿಗೆ ನೀಡುವ ಕರ ಪತ್ರದಲ್ಲಿ # 2186, 5 ನೇ ಮುಖ್ಯರಸ್ತೆ, ಎಂಸಿಸಿ `ಎ’ ಬ್ಲಾಕ್, ದಾವಣಗೆರೆ ಎಂದು ನಮೂದಿಸಿದ್ದಾರೆ. ಈ ಎರಡು ವಿಳಾಸ ಬೇರೆ ಬೇರೆ ಆಗಿದ್ದು, ಮತದಾರಲ್ಲಿ ತಾನು ಸ್ಥಳೀಯ ಅಭ್ಯರ್ಥಿ ಎಂದು ಸುಳ್ಳು ಹೇಳಿದ್ರಾ..? ಎಂಬ ಪ್ರಶ್ನೆ ಮೂಡಿದೆ.
ಪ್ರಸನ್ನ ಕುಮಾರ್ ಅವರು ಚುನಾವಣೆ ಆಯೋಗಕ್ಕೆ ಕೊಟ್ಟ ವಿಳಾಸವನ್ನು ಕರಪತ್ರದಲ್ಲಿ ಮುದ್ರಿಸದೆ, ಕರ ಪತ್ರದಲ್ಲಿ ಸ್ಥಳೀಯ ನಿವಾಸಿ ಎಂದು ನಮೂದಿಸಿ ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸಿದ್ರಾ ಅನ್ನೋ ಅಂಶ ಕರ ಪತ್ರದಲ್ಲಿ ಉಲ್ಲೇಖವಾಗಿದೆ.