ಡಿವಿಜಿ ಸುದ್ದಿ, ದಾವಣಗೆರೆ: ನಗರದ ರಾಷ್ಟ್ರೀಯ ಹೆದ್ದಾರಿ 4 ಬಳಿಯ ಇರುವ ಧೋಬಿಘಾಟ್ ಮೂಲ ಸೌಲಭ್ಯ ಕಲ್ಪಿಸುವಂತೆ ಮಡಿವಾಳ ಸಮುದಾಯದ ಮುಖಂಡರು ಮೇಯರ್ ಬಿ.ಜಿ. ಅಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಧೋಬಿಘಾಟ್ ನಲ್ಲಿ ಪಾಲಿಕೆ ವ್ಯಾಪ್ತಿಯ ನಾಗರಿಕರ, ವಸತಿ ಗೃಹಗಳ, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ಬಟ್ಟೆಗಳನ್ನು ಶುಚಿ ಮಾಡುವ ಜೊತೆ ಮಡಿ ಮಾಡುವ ಕಾಯಕದಲ್ಲಿ ನಿರತರಾಗಿರುವ ನಮಗೆ ಯಾವುದೇ ಮೂಲಸೌಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಸಮುದಾಯದ ಮುಖಂಡ ಎಚ್.ಜಿ. ಉಮೇಶ್ ಹೇಳಿದರು.
ದಿನನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೂ ನೀರಿನಲ್ಲಿ ನಿಂತು ಬಟ್ಟೆಗಳನ್ನು ತೊಳೆಯುವುದರಿಂದ ಕೈ ಮತ್ತು ಕಾಲುಗಳು ನೀರಿನಿಂದಾಗಿ ಸೆಲೆತು ಹೋಗಿವೆ. ಸೂಕ್ತ ಚಿಕಿತ್ಸೆ ಇಲ್ಲದೇ ಗ್ಯಾಂಗ್ರಿನ್ ರೋಗಗಕ್ಕೆ ತ್ತಾಗುತ್ತಿದ್ದಾರೆ. ಜಿಲ್ಲಾಡಳಿತ ಈ ಹಿಂದೆ 1 ಕೋಟಿ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಿತ್ತು. ಆದರೆ, ಇಲ್ಲಿ ಅವಶ್ಯವಿರುವ ಬಟ್ಟೆ ತೊಳೆಯುವ ಮಷಿನ್‍ಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ. ಇದಲ್ಲದೇ ಬಟ್ಟೆ ತೊಳೆಯಲು ನೀರಿನ ಅಭಾವ ಕೂಡ ಹೆಚ್ಚಾಗಿದೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿ ಬಟ್ಟೆ ತೊಳೆಯುವ ಯಂತ್ರವನ್ನು ಅಳವಡಿಸಿ, ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿದರು.
ನಂತರ ಮೇಯರ್ ಅಜಯ್‍ಕುಮಾರ್ ಮಾತನಾಡಿ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶಾಸಕರೊಂದಿಗೆ ಸೂಕ್ತ ಸೌಲಭ್ಯ ಕಲ್ಪಿಸುತ್ತೇನೆ ಎಂದರು ಈ ಸಂದರ್ಭದಲ್ಲಿ ಎಂ.ವೈ. ಸತೀಶ್, ಮಡಿಕಟ್ಟೆ ಸಮಿತಿಯ ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಎಂ.ರವಿ, ಬಿ. ರವಿಕುಮಾರ್, ಎಂ.ವೈ. ರಮೇಶ್, ನಿಂಗರಾಜ್, ರಾಕೇಶ್, ಶಿವಮೂರ್ತೆಪ್ಪ, ಗುತ್ಯಪ್ಪ, ಬಸವರಾಜ, ಶಂಕರ್, ಮಡಿವಾಳಪ್ಪ, ಸೋಮಶೇಖರ್, ಮಂಜುನಾಥ್ ಮಟ್ಟಿ, ಪರಶುರಾಮ, ಷಣ್ಮುಖಪ್ಪ ಉಪಸ್ಥಿತರಿದ್ದರು.



