ಡಿವಿಜಿ ಸುದ್ದಿ, ಚನ್ನಗಿರಿ: ಮದುವೆ ಕಾರ್ಯಕ್ಕೆ ಆಂಧ್ರಪ್ರದೇಶದಿಂದ ಶಿಮೊಗ್ಗೆಕ್ಕೆ ಹೋಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಮೈಲುಗಲ್ಲಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಚನ್ನಗಿರಿಯಲ್ಲಿ ನೆಡೆದಿದೆ. ಸ್ಥಳದಲ್ಲಿಯೇ 3 ಮಹಿಳೆಯರು ಸಾವನ್ನಪ್ಪಿದ್ದು, 15 ಜನರಿಗೆ ಗಾಯವಾದ ಘಟನೆ ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿತ ಲಾರಿ ಮಾವಿಕಟ್ಟೆ ಗ್ರಾಮದ ಬಳಿ ಮೈಲುಗಲ್ಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಮದುವೆ ಕಾರ್ಯಕ್ಕೆ ಹೋಗುತ್ತಿದ್ದ ಮೂರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವರಲಕ್ಷ್ಮಿ (40), ಅನುಷಾ(38), ರತ್ಮಮ್ಮ(56) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಸ್ಥಳಕ್ಕೆ ಚನ್ನಗಿರಿ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಗೆ ರಮಾನಿಸಲಾಗಿದೆ. ಆಂಧ್ರಪ್ರದೇಶದದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿ ಹೋಗುತ್ತಿತ್ತು. ಆಂಧ್ರಪ್ರದೇಶದ ಹುಡುಗನ ಜೊತೆ ಶಿವಮೊಗ್ಗಾ ಹುಡುಗಿಯ ವಿವಾಹ ನಿಗದಿಯಾಗಿತ್ತು.