ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಾದ್ಯಂತ ನಾಳೆ ಸಂಪೂರ್ಣ ಲಾಕ್ ಡೌನ್ ಇರಲ್ಲ. ರಾಜ್ಯ ಸರ್ಕಾರ ಭಾನುವಾರದ ಸಂಪೂರ್ಣ ಲಾಕ್ ಡೌನ್ ಆದೇಶ ಹಿಂಪಡೆದುಕೊಂಡಿದ್ದು, ಈ ಆದೇಶ ಜಿಲ್ಲೆಯಲ್ಲಿಯೂ ಅನ್ವಯವಾಗುತ್ತದೆ.
ಮೇ 18 ರಂದು ಹೊರಡಿಸಲಾದ ಲಾಕ್‍ಡೌನ್ ಆದೇಶವನ್ನು ಮಾರ್ಪಡಿಸಿ ಮೇ 31 ರ ಭಾನುವಾರದಂದು ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಇದ್ದ ಕರ್ಫ್ಯೂ ಆದೇಶ ತೆರವುಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ನಾಳೆ ಮದ್ಯ ಮಾರಾಟ ನಿಷೇಧವನ್ನು ವಾಪಸ್ ಪಡೆಯಲಾಗಿದೆ. ನಾಳೆ ಎಂದಿನಂತೆ ಆರ್ಥಿಕ ಚಟುವಟಿಕೆ ನಡೆಯಲಿದೆ.