ಡಿವಿಜಿ ಸುದ್ದಿ, ಹೊನ್ನಾಳಿ: ದೇಶ ಕಾಯುವ ಯೋಧರು, ರೈತರು ಎರಡು ಕಣ್ಣುಗಳಿದ್ದಂತೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹೇಳಿದರು.
ಹಿರೇಕಲ್ಮಠದ ಲಿಂ. ಚಂದ್ರಶೇಖರ ಸ್ವಾಮೀಜಿ ಅವರ ಸ್ಮರಣಾರ್ಥ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಲ್ಲದೇ ಊಟ ಮಾಡಲು ಸಾಧ್ಯವಿಲ್ಲ. ರೈತ ದೇಶದ ಬೆನ್ನೆಲುಬು. ಅದೇ ರೀತಿ ಯೋಧ ದೇಶದ ಗಡಿ ಕಾಯದಿದ್ದರೆ, ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ ಎಂದರು.
ಕಷ್ಟ ಎಲ್ಲರಿಗೂ ಬರುತ್ತೆ, ಅದನ್ನು ಧೈರ್ಯವಾಗಿ ಎದುರಿಸಬೇಕು. ಪ್ರಾಣ ಕಳೆದುಕೊಳ್ಳುವುದು ಸರಿಯಲ್ಲ ಎಂದ ಅವರು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ…ಹಾಡಿನ ಸಾಲುಗಳನ್ನು ಹಾಡಿ ರಂಜಿಸಿದರು.
ಅಪ್ಪಾಜಿ ಅವರು ಆರೋಗ್ಯವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಂಡಿದ್ದರು. ಅವರ ಯೋಗ ಸಾಧನೆಯಿಂದ ಅಷ್ಟೊಂದು ಆರೋಗ್ಯವಾಗಿದ್ದರು.ಬಾಬಾ ರಾಮದೇವ ಅವರು ಹರಿದ್ವಾರದಿಂದ ಹೊನ್ನಾಳಿಗೆ ಬಂದಿದ್ದಾರೆ. ಎಲ್ಲಿ ಹೆಚ್ಚು ಪ್ರೀತಿ ಇರತ್ತೋ ಅಲ್ಲಿಗೆ ಹೆಚ್ಚು ಜನ ಬರುತ್ತಾರೆ. ಕೃಷಿ ಬಗ್ಗೆ ಅನುಭವವಿಲ್ಲ, ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.