ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಕೆರೆಗಳ ಸಂರಕ್ಷಣೆ ಕೆರೆ ಸಂರಕ್ಷಣಾ ಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಷ್ಟು ಕೆರೆಗಳಿವೆ. ಅವುಗಳ ವಿಸ್ತೀರ್ಣ ಎಷ್ಟು..? ಎಷ್ಟು ಕೆರೆ ಒತ್ತುವರಿಯಾಗಿವೆ..? ಎಷ್ಟು ಕೆರೆ ಹೂಳು ಎತ್ತಲಾಗಿದೆ ಎಂಬ ಬಗ್ಗೆ ಜಿಲ್ಲಾ ಪಂಚಾಯತಿ, ಸಣ್ಣ ನೀರಾವರಿ ಇಲಾಖೆಗೆ ಮಾಹಿತಿ ಕೇಳಿದರೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ಹೀಗಾಗಿ ಆಯಾ ಕೆರೆಗಳ ಮುಂದೆ ಕೆರೆಯ ವಿಸ್ತೀರ್ಣ, ನೀರಿ ಮಟ್ಟ ಕುರಿತು ಮಾಹಿತಿ ಹೊಂದಿರುವ ನಾಮಫಲಕ ಹಾಕಬೇಕು.
ಇದಲ್ಲದೆ ಬೇಸಿಗೆಯಲ್ಲಿ ಕೆರೆಗಳ ಹೂಳು ತಗೆಸಿ, ಕೆರೆ ಒತ್ತುವರಿ ತೆರವುಗೊಳಿಸಬೇಕು. ಮಳೆಗಾಲದಲ್ಲಿ ಸಂಗ್ರಹವಾದ ನೀರನ್ನು ಸಂರಕ್ಷಿಸಲು ಸಂರಕ್ಷಣಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ನೀರಾವರಿ ನಿಗಮದ ಮೆಲೆಬೆನ್ನೂರು ಮತ್ತು ದಾವಣಗೆರೆ ವಿಭಾಗದಲ್ಲಿ ಅತಿದೊಡ್ಡ ಕೆರೆಗಳೆಂದರೆ ಶಾಂತಿ ಸಾಗರ ಮತ್ತು ದೇವರ ಬೆಳಕೆರೆ ಕೆರೆಗಳಾಗಿವೆ. ಇನ್ನುಳಿದ ಕೆರೆಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ.ಇನ್ನು ಕೆರೆಗೆ ಭೂ ಸ್ವಾಧೀನವಾದ ಜಮೀನು ಸರ್ಕಾರಿ ಎಂದು ಬದಲಾವಣೆಯಾಗಿಲ್ಲ. ಆದರೆ, ಕೆಲವು ಜಮೀನುಗಳು ಮರು ಮಾರಾಟವಾಗಿವೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.