ಡಿವಿಜಿ ಸುದ್ದಿ, ದಾವಣಗೆರೆ: ಕರ್ನಾಟಕ ಸುಗಮ ಸಂಗೀತ ಪರಿಷತ್ ಪ್ರತಿ ವರ್ಷದಂತೆ ಈ ವರ್ಷವೂ ಸುಗಮ ಸಂಗೀತ ರಾಜ್ಯ ಸಮ್ಮೇಳನ “ಗೀತೋತ್ಸವ-2020” ಹಮ್ಮಿಕೊಂಡಿದೆ. ಪ್ರಪ್ರಥಮ ಬಾರಿಗೆ ಮಹಾರಾಷ್ಟ್ರದ ಮುಂಬೈಯಲ್ಲಿ ಜನವರಿ 11ಮತ್ತು 12 ರಂದು ನಡೆಯುವ ಈ ಸಮ್ಮೇಳನದಲ್ಲಿ ಹಾಡಲು ದಾವಣಗೆರೆ ಜಿಲ್ಲೆಯಿಂದ ಇಬ್ಬರು ಪ್ರತಿಭಾವಂತ ಗಾಯಕಿಯರಾದ ಸಂಗೀತಾ ರಾಘವೇಂದ್ರ, ಇಂಚರ ಮೂರ್ತಿ, ಆಯ್ಕೆಯಾಗಿದ್ಧಾರೆ.
“ಕರ್ನಾಟಕದ ಕೋಗಿಲೆ” ರಾಜ್ಯ ಪ್ರಶಸ್ತಿ ವಿಜೇತರಾದ ಸಂಗೀತ ರಾಘವೇಂದ್ರ ಹಾಗೂ ನಾಡಿನ ವಿವಿಧ ಜಿಲ್ಲೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಯುವ ಪ್ರತಿಭೆ ಇಂಚರ ಮೂರ್ತಿ ಆಯ್ಕೆಯಾಗಿದ್ದು, ಜಿಲ್ಲಾ ಕರ್ನಾಟಕ ಸುಗಮ ಸಂಗೀತ ಪರಿಷತ್ತಿಗೆ ಹೆಮ್ಮೆ ತರುವಂತಹದು ಎಂದು ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಜಿಲ್ಲಾ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸರ್ವ ಸದಸ್ಯರ ಪರವಾಗಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಆರ್. ಹೇಮಂತ್‌ಕುಮಾರ ಅಭಿನಂದನೆ ಸಲ್ಲಿಸಿದ್ದಾರೆ.



