ಡಿವಿಜಿ ಸುದ್ದಿ, ದಾವಣಗೆರೆ: 2 ಸಾವಿರ ವರ್ಷ ಗಳ ಇತಿಹಾಸ ಉಳ್ಳ ಕನ್ನಡ ಭಾಷೆ ತೆಲುಗು ಭಾಷೆಗೆ ಲಿಪಿ ತಂದು ಕೊಟ್ಟ ಭಾಷೆಯಾಗಿದೆ ಎಂದು ಹಿರಿಯ ನ್ಯಾಯವಾದಿ ರೇವಣ್ಣ ಬಳ್ಳಾರಿ ಹೇಳಿದರು.
ಆವವರೆಗೆರೆ ಜಿ.ಪಿ.ಜಿ.ಎಂ. ಶಾಲೆಯಲ್ಲಿ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮ ಉದ್ಘಾಟನೆ ಮಾತನಾಡಿದ ಅವರು, ಕನ್ನಡ ಭಾಷೆ ಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿಯ ಬೇಕು. ನನಗೆ ಕನ್ನಡ ಭಾಷೆ ಖ್ಯಾತಿಯ ತಂದಿದೆ. ಡಾಕ್ಟರ್ ಗೌರವ ತಂದಿದೆ. ನೀವು ತಾಯಿಯಂತೆ ಭಾಷೆ ಪ್ರೀತಿಸಿ ಬೇಕು. ತಾಯಿ ಜನ್ಮ ಕೊಟ್ಟರೆ, ಕನ್ನಡಮ್ಮ ಮಾತು ಕೊಟ್ಟವಳು ಎಂದರು.
ಕೊಕ್ಕನೂರು ಗ್ರಾಮದ ಬಿ.ರಾಜಶೆಖರಪ್ಪ ಅವರ 40 ವರ್ಷ ಸಂಶೋಧನೆಗೆ ಈ ಸಲ ರಾಜ್ಯೋತ್ಸವ ಪ್ರಶಸ್ತಿ ಸಂತೋಷ ತಂದಿದೆ ಎಂದರು.
ಸಾಹಿತಿ ಎನ್. ಜೆ. ಶಿವ ಕುಮಾರ್, ಆವರಗೆರೆ ಪರಮೇಶ್ವರಪ್ಪ, ಸಿದ್ದಲಿಂಗಸ್ವಾಮಿ ಸೇರಿದಂತೆ ಇತ್ತಿತರರು ಭಾಗವಹಿಸಿದರು.



