ಡಿವಿಜಿ ಸುದ್ದಿ, ದಾವಣಗೆರೆ: ಸಾಹಿತ್ಯ ನಿತ್ಯ ನಿರಂತರ. ಎಲ್ಲಿ ವರೆಗೆ ಸಮಾಜ ಇರುತ್ತದೆಯೋ ಅಲ್ಲಿವರೆಗೆ ಸಾಹಿತ್ಯ ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು.
ಎ.ವಿ. ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಅನುಪಮ ಅವರು ಬರೆದಿರುವ ಬೆಳಕಿ ನಡೆಗೆ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜೀನದಲ್ಲಿ ಪ್ರೀತಿ, ಸಾವು, ಬದುಕು ಮತ್ತು ಯುದ್ಧ ಬಿಟ್ಟು ಕಾವ್ಯದಲ್ಲಿ ಹೊಸ ಕಲ್ಪನೆ ಇಲ್ಲ. ಆದರೂ, ಕಾವ್ಯ ಓದುವರು, ಬರೆಯುವರು ಇದ್ದಾರೆ. ಯಾಕೆಂದರೆ ಪ್ರತಿಯೊಬ್ಬರು ವಿಭಿನ್ನವಾಗಿ ಬರೆಯುವ ಕಲೆ ಹೊಂದಿದ್ದಾರೆ. ಹೀಗಾಗಿ ಕಾವ್ಯ ನಿತ್ಯ ನಿರಂತರ. ಜೀವನದಲ್ಲಿ ಕಾವ್ಯ ನೀಡುವಷ್ಟು ಆನಂದ, ಬೇರೆ ಯಾವ ಕ್ಷೇತ್ರದಲ್ಲಿಯೂ ನೀಡಲು ಸಾಧ್ಯವಿಲ್ಲ ಎಂದರು.

ಲೇಖಕಿ ಅನುಪಮ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳಾದ ಪ್ರೀತಿ, ವಿಶ್ವಾಸ, ಸಹನೆ ಹಾಗೂ ತಾಳ್ಮೆ ಕುಸಿಯುತ್ತಿರುವ ಹೊತ್ತಿನಲ್ಲಿ ಸಮಾಜಕ್ಕೆ ಏನಾದ್ರೂ ಸಂದೇಶ ನೀಡಬೇಕು ಎನ್ನುವ ಉದ್ದೇಶದಿಂದ ಈ ಪುಸ್ತಕ ಬತೆದಿದ್ದೇನೆ. ಈ ಪುಸ್ತಕ ಬರೆಯಲು ಸಹಕರಿಸಿದ ಸ್ನೇಹಿತರು, ನಮ್ಮ ಮನೆಯವರ ಸಹಕಾರ ಅತ್ಯಮೂಲ್ಯವಾಗಿತ್ತು. ಜೊತೆಗೆ ಲತಾ ನರ್ಸಿಂಗ್ ಹೋಮ್ ಸಬ್ಬಂದಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಎಸ್. ಟಿ. ಶಾಂತ ಗಂಗಾಧರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್. ಎಸ್. ಮಂಜುನಾಥ್ ಕುರ್ಕಿ, ಸಾಹಿತಿ ಕತ್ತಿಗೆ ಚನ್ನಪ್ಪ, ಲತಾ ನರ್ಸಿಂಗ್ ಹೋಮ್ ನ ಡಾ. ವಿರೂಪಾಕ್ಷಪ್ಪ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.



