ಡಿವಿಜಿ ಸುದ್ದಿ, ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ತೊಗರಿಯ ನವೀನ ತಳಿ ಬಿಆರ್‌ಜಿ- 5 ನ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.
ಬೇಸಾಯ ಶಾಸ್ತ್ರಜ್ಞ ಮಲ್ಲಿಕಾರ್ಜುನ ಬಿ.ಓ. ಅವರು, ಪ್ರತಿ 6 ಸಾಲು ಮೆಕ್ಕೆಜೋಳದಲ್ಲಿ1 ಸಾಲು ತೊಗರಿ ಬೆಳೆಯುವುದರಿಂದ ಸೈನಿಕ ಹುಳು ಹತೋಟಿ ಮಾಡುವುದರ ಜೊತೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದಾಗಿದೆ ಎಂದು ರೈತರಿಗೆ ತಿಳಿಸಿದರು.
ಮಣ್ಣು ವಿಜ್ಞಾನಿಗಳಾದ ಶ್ರೀ ಹನುಮಂತನಗೌಡ್ರು ಮಾತನಾಡಿ, ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಸಮತೋಲನದಲ್ಲಿ ಇಟ್ಟುಕೊಳ್ಳುವುದರ ಜೊತೆ ಖರ್ಚು ಕಡಿಮೆ ಮಾಡಲು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ಮಹೇಶ್ವರಪ್ಪ, ಜಿ. ಮಲ್ಲಿಕಾರ್ಜುನಪ್ಪ, ವಿರುಪಾಕ್ಷಪ್ಪ, ಗಂಗಾಧರಪ್ಪ ಮತ್ತು ಕೇಂದ್ರದ ವಿಸ್ತರಣಾ ತಜ್ಞ ರಘುರಾಜ ಜೆ. ರವರು ಉಪಸ್ಥಿತರಿದ್ದರು.